Published
3 months agoon
By
Akkare News
ಈಕೆ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಲ್ಲಿ ಮನೆ ರಿಪೇರಿಗೆಂದು 85 ಸಾವಿರ ರೂ. ಸಾಲವನ್ನು ಪಡೆದಿದ್ದು, ಬಳಿಕ ಕಳೆದ ಜು.7ರಂದು ಇವರ ಪತಿ ಕೂಲಿ ಕೆಲಸಕ್ಕೆಂದು ಹೋದ ಬಳಿಕ ಈಕೆ ಮಂಗಳೂರಿಗೆ ಕೂಲಿ ಕೆಲಸಕ್ಕೆಂದು ತೆರಳಿದ್ದಳು. ಆಕೆ ಮಂಗಳೂರಿನಲ್ಲಿ ಕೆಲಸ ಮಾಡಿಕೊಂಡಿರಬಹುದೆಂದು ನಾನು ಭಾವಿಸಿದ್ದೆ.
ಆದರೆ ಆ ಬಳಿಕ ಆಕೆ ನನಗೆ ಫೋನ್ ಮಾಡುವುದಾಗಲೀ ಅಥವಾ ಬೇರೆ ಯಾರಲ್ಲಿಯೂ ಫೋನ್ ಮಾಡಿ ಮಾತನಾಡುವುದಾಗಲೀ ಮಾಡಿಲ್ಲ.
ಆಕೆ ಸಾಲ ಕಟ್ಟಲು ಸಂಘಕ್ಕೆ ಬರುತ್ತಾಳೆಂದು ಭಾವಿಸಿ ನಾನು ಸುಮ್ಮನಿದ್ದೆ. ಆದರೆ ಆಕೆ ಅಲ್ಲಿಗೂ ಬಂದಿಲ್ಲ. ಈಗ ಅವಳ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಆಕೆ ಮನೆಗೆ ಬಾರದೆ ನಾಪತ್ತೆಯಾಗಿದ್ದಾಳೆ ಎಂದು ಸೆ.6ರಂದು ಉಪ್ಪಿನಂಗಡಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.