Published
3 months agoon
By
Akkare Newsಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯದಲ್ಲಿ ಅಕ್ಟೋಬರ್, 17 ರಂದು ಜರುಗುವ “ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಬವ ಜಾತ್ರೆಯ” ಕುರಿತು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಅವರ ಅಧ್ಯಕ್ಷತೆಯಲ್ಲಿ ಪೂರ್ವ ಸಿದ್ಧ್ದತೆ ಬಗ್ಗೆ ಚರ್ಚಿಸಲು ಸೆಪ್ಟೆಂಬರ್, 14 ರಂದು ಮಧ್ಯಾಹ್ನ 3.30 ಗಂಟೆಗೆ ‘ಶ್ರೀ ಭಗಂಡೇಶ್ವರ ದೇವಾಲಯದ ಹಳೆ ಮುಡಿ ಕಟ್ಟಡದಲ್ಲಿ’ ಪೂರ್ವಭಾವಿ ಸಭೆ ನಡೆಯಲಿದೆ.
ಆದ್ದರಿಂದ ‘ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ’ ಜಾತ್ರಾ ಮಹೋತ್ಸವದ ಸಿದ್ಧತೆ ಬಗ್ಗೆ ಚರ್ಚಿಸಲು ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಎಲ್ಲಾ ಸಮುದಾಯಗಳ ಮುಖಂಡರು, ಊರಿನ ಹಿರಿಯರು, ನಾಡಿನ ಎಲ್ಲಾ ದೇವಾಲಯಗಳ ತಕ್ಕ ಮುಖ್ಯಸ್ಥರುಗಳು ಮತ್ತು ಸಾರ್ವಜನಿಕರು ಆಗಮಿಸಿ ತಮ್ಮ ಅಮೂಲ್ಯವಾದ ಸಲಹೆ ಸೂಚನೆಗಳನ್ನು ನೀಡಿ ತುಲಾ ಸಂಕ್ರಮಣ ಜಾತ್ರೆಯನ್ನು ಯಶಸ್ವಿಯಾಗಲು ಸಹಕರಿಸುವಂತೆ ದೇವಾಲಯದ ಇಒ ಚಂದ್ರಶೇಖರ್ ಅವರು ಕೋರಿದ್ದಾರೆ. ಇದೇ ಪ್ರಥಮ ಬಾರಿ ಪೂರ್ವಭಾವಿ ಸಭೆ ಭಾಗಮಂಡಲದಲ್ಲಿ ಆಯೋಜಿಸಿದ್ದು ವಿಶೇಷವಾಗಿದೆ.
ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ :64(1),351 (2) BNS-2023 ಕಲಂ4 ಪೋಕೋ ಕಾಯ್ದೆ- 2012 ರಂತೆ ಅಪರಾಧ ಸಂಖ್ಯೆ: 104/2024 ದಾಖಲಿಸಿಕೊಂಡು,ಸೆ.12 ರಂದು ವಿಟ್ಲ ಕಸಬ ಗ್ರಾಮದ ಜೋಗಿಮಠ ನಿವಾಸಿ ಆರೋಪಿ ಸತೀಶ್ ಸುವರ್ಣ(38) ನನ್ನು ಬಂಧಿಸಿದ್ದಾರೆ.