Published
3 months agoon
By
Akkare Newsಪುತ್ತೂರು: ಕಥೋಲಿಕ್ ಸಭಾ ಮಂಗಳೂರು ಪ್ರದೇಶ ಇದರ ಪುತ್ತೂರು ವಲಯದ ಆಶ್ರಯದಲ್ಲಿ ಕರ್ನಾಟಕ ಸರಕಾರದ ವಿಧಾನ ಪರಿಷತ್ತಿನ ಸದಸ್ಯರಾಗಿ ಎರಡನೇ ಬಾರಿಗೆ ಆಯ್ಕೆಯಾದ ಐವನ್ ಡಿ’ಸೋಜರವರನ್ನು ಅಭಿನಂದಿಸುವ ಕಾರ್ಯಕ್ರಮ ಸೆ.15 ರಂದು ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯದ ಸಭಾಂಗಣದಲ್ಲಿ ಜರಗಲಿದೆ.
ಈ ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯದ ಧರ್ಮಗುರು ವಂ.ಜೆರಾಲ್ಡ್ ಡಿ’ಸೋಜ, ಕಥೋಲಿಕ್ ಸಭಾ ಪುತ್ತೂರು ವಲಯಕ್ಕೆ ಸಂಬಂಧಪಟ್ಟ ಕಥೋಲಿಕ್ ಸಭಾ ಬನ್ನೂರು ಘಟಕ, ಪುತ್ತೂರು ಘಟಕ, ಕಡಬ ಘಟಕ, ಕೊಕ್ಕಡ ಘಟಕ, ನೆಲ್ಯಾಡಿ ಘಟಕ, ಸುಳ್ಯ, ಉಪ್ಪಿನಂಗಡಿ ಘಟಕದ ಸದಸ್ಯರು ಭಾಗವಹಿಸಲಿದ್ದಾರೆ ಎಂದು ಕಥೋಲಿಕ್ ಸಭಾ ಪುತ್ತೂರು ವಲಯದ ಅಧ್ಯಕ್ಷೆ ಲವೀನಾ ಪಿಂಟೊ, ಕಾರ್ಯದರ್ಶಿ ಅರುಣ್ ರೆಬೆಲ್ಲೋ, ಕೋಶಾಧಿಕಾರಿ ನವೀನ್ ಬ್ಯಾಗ್ಸ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.