ನಮ್ಮೊಂದಿಗೆ ಸಂಪರ್ಕ ಸಾಧಿಸಿ

ರಾಜಕೀಯ

ಬಹುಜನರು ತಮ್ಮ ಹಕ್ಕು ಪಡೆಯುವುದು ಮೋದಿಗೆ ಇಷ್ಟವಿಲ್ಲ: ರಾಹುಲ್ ಗಾಂಧಿ

Published

on

ಬಿಜೆಪಿಯನ್ನು “ಬಹುಜನ ವಿರೋಧಿ” ಎಂದು ಆರೋಪಿಸಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು, “ಅದು ಎಷ್ಟೇ ಸುಳ್ಳುಗಳನ್ನು ಹರಡಿದರೂ ಮೀಸಲಾತಿಗೆ ಧಕ್ಕೆಯಾಗಲು ನಾವು ಬಿಡುವುದಿಲ್ಲ” ಎಂದು ಸೋಮವಾರ ಹೇಳಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಬರೆದಿರುವ ರಾಹುಲ್ ಗಾಂಧಿ, “ಪ್ರಧಾನಿ ನರೇಂದ್ರ ಮೋದಿ ಅವರು ‘ಜಾತಿ ಗಣತಿ’ ಎಂಬ ಪದವನ್ನು ಹೇಳಲೂ ಹೆದರುತ್ತಾರೆ. ಅವರು ‘ಬಹುಜನರು’ ತಮ್ಮ ಹಕ್ಕುಗಳನ್ನು ಪಡೆಯುವುದನ್ನು ಬಯಸುವುದಿಲ್ಲ. ಬಹುಜನ ವಿರೋಧಿ ಬಿಜೆಪಿ ಎಷ್ಟೇ ಸುಳ್ಳುಗಳನ್ನು ಹರಡಲಿ – ಮೀಸಲಾತಿಗೆ ಹಾನಿಯಾಗುವುದನ್ನು ನಾವು ಬಿಡುವುದಿಲ್ಲ” ಎಂದು ಹೇಳಿದ್ದಾರೆ.

 

“ಸಮಗ್ರ ಜಾತಿ ಗಣತಿ ನಡೆದು ಪ್ರತಿ ವರ್ಗದ ಹಕ್ಕು, ಪಾಲು, ನ್ಯಾಯ ಸಿಗುವವರೆಗೆ, ಮೀಸಲಾತಿ ಮೇಲಿನ ಶೇ.50ರ ಮಿತಿಯನ್ನು ತೆಗೆದು ಹಾಕುವವರೆಗೆ ನಾವು ವಿರಮಿಸುವುದಿಲ್ಲ. ಜನಗಣತಿಯಿಂದ ಪಡೆದ ಮಾಹಿತಿಯು ಭವಿಷ್ಯದ ನೀತಿಗಳಿಗೆ ಆಧಾರವಾಗದವರೆಗೆ ಕಾಂಗ್ರೆಸ್ ವಿರಮಿಸುದಿಲ್ಲ” ಎಂದು ಅವರು ಪ್ರತಿಪಾದಿಸಿದ್ದಾರೆ.

 

 

“ಮೋದಿ ಅವರು ‘ಜಾತಿ ಗಣತಿ’ ಎಂದು ಹೇಳಲೂ ಹೆದರುತ್ತಾರೆ, ಬಹುಜನರು ತಮ್ಮ ಹಕ್ಕುಗಳನ್ನು ಪಡೆಯುವುದನ್ನು ಅವರು ಬಯಸುವುದಿಲ್ಲ!. ನಾನು ಮತ್ತೊಮ್ಮೆ ಪುನರಾವರ್ತಿಸುತ್ತೇನೆ, ನನಗೆ ಇದು ರಾಜಕೀಯ ವಿಷಯವಲ್ಲ, ಬಹುಜನರಿಗೆ ನ್ಯಾಯ ದೊರಕಿಸಿಕೊಡುವುದು ನನ್ನ ಜೀವನದ ಧ್ಯೇಯವಾಗಿದೆ” ಎಂದು ಅವರು ಪ್ರತಿಪಾದಿಸಿದ್ದಾರೆ.

 

 

ಈ ಪೋಸ್ಟ್‌ನಲ್ಲಿ ರಾಹುಲ್‌ ಗಾಂಧಿಯವರು ದೇಶದ ವಿವಿಧ ಭಾಗಗಳಲ್ಲಿ ತಮ್ಮ ಸಾರ್ವಜನಿಕ ಭಾಷಣಗಳ ವೀಡಿಯೋವನ್ನು ಹಂಚಿಕೊಂಡಿದ್ದಾರೆ.

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement