ನಮ್ಮೊಂದಿಗೆ ಸಂಪರ್ಕ ಸಾಧಿಸಿ

ರಾಜಕೀಯ

ಪ್ರಧಾನಿ ಮೋದಿ ಭೇಟಿಯಾದ ತಮಿಳುನಾಡು ಸಿಎಂ ಸ್ಟಾಲಿನ್; ಬಾಕಿ ಹಣ ಬಿಡುಗಡೆಗೆ ಮನವಿ

Published

on

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ, ರಾಜ್ಯದ ಕಲ್ಯಾಣ ಯೋಜನೆಗಳಿಗೆ ಬಾಕಿ ಇರುವ ಹಣ ಬಿಡುಗಡೆ ಸೇರಿದಂತೆ ಮೂರು ಪ್ರಮುಖ ವಿಷಯಗಳ ಕುರಿತು ತ್ವರಿತ ಕ್ರಮಕ್ಕೆ ಒತ್ತಾಯಿಸಿದರು. ಚೆನ್ನೈ ಮೆಟ್ರೋ ಎರಡನೇ ಹಂತದ ಕಾಮಗಾರಿಗೆ ಕೇಂದ್ರದ ಸಹಕಾರವನ್ನೂ ಕೋರಿದರು.

“ಇದು ಪ್ರಧಾನಿ ಮೋದಿಯವರೊಂದಿಗಿನ ಸೌಜನ್ಯದ ಭೇಟಿಯಾಗಿದೆ, ನಾನು 3 ಪ್ರಮುಖ ವಿನಂತಿಗಳನ್ನು ಮಾಡಿದ್ದೇನೆ. ನಮ್ಮ ಮನವಿಯನ್ನು ಪಟ್ಟಿ ಮಾಡುವ ವಿವರವಾದ ಜ್ಞಾಪಕ ಪತ್ರವನ್ನು ಅವರಿಗೆ ನೀಡಿದ್ದೇನೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಚೆನ್ನೈ ಮೆಟ್ರೋದ ಮೊದಲ ಹಂತವನ್ನು ಹೇಗೆ ಜಾರಿಗೆ ತಂದವು. ಅದೇ ರೀತಿ ಚೆನ್ನೈ ಮೆಟ್ರೋದ ಎರಡನೇ ಹಂತವೂ ಜಾರಿಯಾಗಬೇಕು” ಎಂದು ಸಿಎಂ ಸ್ಟಾಲಿನ್ ಹೇಳಿದ್ದಾರೆ.

 

ಸಭೆಯಲ್ಲಿ, ತಮಿಳು ಮೀನುಗಾರರ ಹಿತಾಸಕ್ತಿಗಳನ್ನು ಕಾಪಾಡಲು ವೈಯಕ್ತಿಕವಾಗಿ ಮಧ್ಯಪ್ರವೇಶಿಸುವಂತೆ ಮುಖ್ಯಮಂತ್ರಿಗಳು ಪ್ರಧಾನಿ ಮೋದಿಯವರಿಗೆ ಮನವಿ ಮಾಡಿದರು.

 

ಈ ವಾರದ ಆರಂಭದಲ್ಲಿ, ಸ್ಟಾಲಿನ್ ಅವರು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಿದರು. ಶ್ರೀಲಂಕಾ ನೌಕಾಪಡೆಯಿಂದ ಬಂಧಿಸಲ್ಪಟ್ಟ ತಮಿಳುನಾಡು ಮೀನುಗಾರರಿಗೆ ವಿಧಿಸಲಾಗುತ್ತಿರುವ ಭಾರಿ ದಂಡವನ್ನು ಪರಿಹರಿಸಲು ಕೇಳಿದರು. ಇತ್ತೀಚೆಗೆ ತಮಿಳುನಾಡಿನ 37 ಮೀನುಗಾರರನ್ನು ಬಂಧಿಸಲಾಗಿದ್ದು, ಮೂರು ದೋಣಿಗಳನ್ನು ವಶಪಡಿಸಿಕೊಳ್ಳಲಾಗಿದೆ.

 

 

 

 

ಮೋದಿ ಅವರನ್ನು ಭೇಟಿ ಮಾಡಿದ ಬಳಿಕ ಡಿಎಂಕೆ ಅಧ್ಯಕ್ಷರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದರು. ಸೆಪ್ಟೆಂಬರ್ 28 ರಂದು ಕಾಂಚೀಪುರಂನಲ್ಲಿ ಬೃಹತ್ ವಿರೋಧ ಪಕ್ಷದ ರ್ಯಾಲಿಯನ್ನು ಯೋಜಿಸಲಾಗಿದೆ. ಗುರುವಾರ ಸಂಜೆ ನವದೆಹಲಿಗೆ ಆಗಮಿಸಿದ ಸ್ಟಾಲಿನ್ ಅವರಿಗೆ ಸಂಸದರಾದ ಟಿಆರ್ ಬಾಲು, ತಿರುಚ್ಚಿ ಶಿವ, ದಯಾನಿಧಿ ಮಾರನ್, ಕೆ ಕನಿಮೋಳಿ, ಮತ್ತು ಟಿ ಸುಮತಿ ಸೇರಿದಂತೆ ಡಿಎಂಕೆ ನಾಯಕರಿಂದ ಆತ್ಮೀಯ ಸ್ವಾಗತ ದೊರೆಯಿತು.

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement