ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಸಿನಿಮಾ

ಪುತ್ತೂರಿನ ಹೆಸರನ್ನು “ಜಂಗಲ್-ಮಂಗಲ್ “ಸಿನಿಮಾ ಮೂಲಕ ಹತ್ತೂರಿಗೆ ಪಸರಿಸಿದ ನಿರ್ದೇಶಕರಾದ ಬೆಳ್ಳಿಪ್ಪಾಡಿಯ ರಕ್ಷಿತ್ ಕುಮಾರ್.

Published

on

ಹೆಚ್ಚಾಗಿ ಪುತ್ತೂರಿನವರೇ ಸೇರಿ ಮಾಡಿರುವ ಚಿತ್ರವೊಂದು ಚಿತ್ರರಂಗದಲ್ಲಿ ನಿಧಾನವಾಗಿ ಸದ್ದು ಮಾಡುತ್ತಿದೆ. ‘ಜಂಗಲ್ ಮಂಗಲ್’ ಎಂಬ ವಿಶಿಷ್ಠ ಶೀರ್ಷಿಕೆ ಹೊಂದಿರುವ ಈ ಚಿತ್ರದ ಮೊದಲ ಪೋಸ್ಟರ್ ಇತ್ತೀಚೆಗೆ ಬಿಡುಗಡೆಯಾಗಿದ್ದು ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.

 

ಸಲಗ ಕೆ.ಜಿ.ಫ್ ಮುಂತಾದ ಚಿತ್ರಗಳಲ್ಲಿ ನಟಿಸಿ ಕನ್ನಡ ಚಿತ್ರರಂಗದಲ್ಲಿ ಖಡಕ್ ವಿಲನ್ ಆಗಿ ಹೆಸರುವಾಸಿಯಾಗಿರುವ ಹಾಗೂ ಇತ್ತೀಚೆಗೆ ಬಿಡುಗಡೆಯಾದ ಸರ್ಕಸ್ ಎಂಬ ತುಳು ಚಿತ್ರದಲ್ಲೂ ಖಳನಾಯಕನಾಗಿ ನಟಿಸಿ ಜನಮನ ಗೆದ್ದಿರುವ ಯಶ್ ಶೆಟ್ಟಿ ಈ ಸಿನಿಮಾದ ಈ ಸಿನಿಮಾದ ನಾಯಕ ನಟ.

 

ನಮ್ಮದೇ ಪುತ್ತೂರಿನ ಬೆಳ್ಳಿಪ್ಪಾಡಿ ಗ್ರಾಮದ ರಕ್ಷಿತ್ ಕುಮಾರ್ ಎಂಬವರು ಈ ಚಿತ್ರದ ನಿರ್ದೇಶಕರು. ಚಿತ್ರದ ಛಾಯಾಗ್ರಾಹಕ ವಿಷ್ಣು ಪ್ರಸಾದ್ ಹಾಗೂ ಸಂಗೀತ ನಿರ್ದೇಶಕ ಪ್ರಸಾದ್ ಕೆ ಶೆಟ್ಟಿ, ಇವರು ಕೂಡ ಪುತ್ತೂರಿನವರೇ ಎಂಬುದು ವಿಶೇಷ. ಕಾಂತಾರ ಖ್ಯಾತಿಯ ದೀಪಕ್ ರೈ ಪಾಣಾಜೆ, ಬಿಗ್ ಬಾಸ್ ಖ್ಯಾತಿಯ ಉಗ್ರಂ ಮಂಜು ಮುಂತಾದ ಅನೇಕ ಅನುಭವಿ ತಾರಗಣ ಹೊಂದಿರುವ ಈ ಚಿತ್ರವನ್ನು ಕನ್ನಡದ ಹೆಸರಾಂತ ನಿರ್ದೇಶಕ ಸಿಂಪಲ್ ಸುನಿ ಅವರು ಅರ್ಪಿಸುತ್ತಿದ್ದಾರೆ.

 

ಕಾಡಿನಿಂದ ಸುತ್ತುವರಿದಿರುವ ಸಣ್ಣ ಊರೊಂದರಲ್ಲಿ ನಡೆಯುವ ಮಜವಾದ ಘಟನೆಯನ್ನು ಒಳಗೊಂಡಿರುವ ಚಿತ್ರ‌.
ದಕ್ಷಿಣಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಸುತ್ತಮುತ್ತ ಸಂಪೂರ್ಣವಾಗಿ ಚಿತ್ರೀಕರಣ ನಡೆದು, ಬಿಡುಗಡೆಗೆ ಅಂತಿಮ ಹಂತದ‌ ತಯಾರಿಯಲ್ಲಿದೆ.

 

 

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement