Published
2 months agoon
By
Akkare Newsಬಿಳಿಯೂರು: ಇಲ್ಲಿನ ಶ್ರೀವಿಷ್ಣು ಭಜನಾ ಮಂದಿರದಲ್ಲಿ ನಡೆಯುವ ವಾರದ ನಿತ್ಯ ಭಜನೆಯು ನವರಾತ್ರಿಯ ಮದ್ಯ ಭಾಗದಲ್ಲಿ ಬಂದಿದ್ದು, ಮಂದಿರಕ್ಕೆ ಒಳಪಟ್ಟ ಗ್ರಾಮದ ಸರ್ವ ಭಕ್ತರು ಭಜನೆಯಲ್ಲಿ ಪಾಲ್ಗೊಂಡು ನವರಾತ್ರಿಯಲ್ಲೊಂದು ದಿನ ವಿಜೃಂಭಣೆಯ ಹಬ್ಬವನ್ನು ಇಲ್ಲಿ ಭಜನಾ ಸಂಕೀರ್ತನೆಯ ಮೂಲಕ ಆಚರಿಸಿಕೊಂಡರು.
ನಿರ್ವಹಣಾ ಸಮಿತಿಯ ಭಜನಾ ಸಂಚಾಲಕಿ ಶ್ರೀಮತಿ ಪುಷ್ಪಾ ರವರು ಈ ದಿನ ಹೆಚ್ಚುವರಿ ಭಜನೆಗಳನ್ನು ಆಯೋಜಿಕೊಂಡಿದ್ದು ಮಾತ್ರವಲ್ಲದೆ, ಅಧ್ಯಕ್ಷರು ಶ್ರೀಮತಿ ವಿನಿತಾ ರೈ ಮತ್ತು ಕಾರ್ಯದರ್ಶಿ ಶ್ರೀಮತಿ ರೇಷ್ಮಾ ಶೆಟ್ಟಿಯವರ ಸಹಯೋಗದ ಎಲ್ಲಾ ಪದಾಧಿಕಾರಿಗಳು ಮಂದಿರದಲ್ಲಿ ನವರಾತ್ರಿ ಪ್ರಯುಕ್ತದ ವಿಶೇಷ ಭಜನೆಯ ವಿಜೃಂಭಣೆಗೆ ಕಾರಣರಾದುದು ಭಕ್ತರಲ್ಲಿ ಸಂತಸ ತಂದಿದೆ.