Published
3 weeks agoon
By
Akkare Newsಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೂ ಮುನ್ನ ಏಕನಾಥ್ ಶಿಂಧೆ ಸರ್ಕಾರ ಸೋಮವಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ಮುಂಬೈಗೆ ಪ್ರವೇಶಿಸುವ ಎಲ್ಲಾ ಐದು ಟೋಲ್ ಬೂತ್ಗಳಲ್ಲಿ ಲಘು ಮೋಟಾರು ವಾಹನಗಳಿಗೆ ಟೋಲ್ ಶುಲ್ಕವನ್ನು ಸಂಪೂರ್ಣವಾಗಿ ರದ್ದುಗೊಳಿಸುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಸರ್ಕಾರದ ಈ ಮಹತ್ವದ ನಿರ್ಧಾರ ಇಂದು ಮಧ್ಯರಾತ್ರಿ 12 ಗಂಟೆಯಿಂದಲೇ ಜಾರಿಗೆ ಬರಲಿದೆ.
ಸರ್ಕಾರದ ಈ ನಿರ್ಧಾರದ ಬಗ್ಗೆ ಮಾಹಿತಿ ನೀಡಿದ ಸಚಿವ ದಾದಾಜಿ ದಗ್ದು ಭೂಸೆ, ಮಧ್ಯರಾತ್ರಿಯ ನಂತರ ಲಘು ವಾಹನಗಳಿಗೆ ಟೋಲ್ನಿಂದ ವಿನಾಯಿತಿ ನೀಡಲಾಗುವುದು ಎಂದು ಹೇಳಿದ್ದಾರೆ. ಮುಂಬೈಗೆ ಪ್ರವೇಶಿಸುವ ಸಮಯದಲ್ಲಿ, ದಹಿಸರ್ ಟೋಲ್, ಆನಂದ್ ನಗರ ಟೋಲ್, ವೈಶಾಲಿ, ಐರೋಲಿ ಮತ್ತು ಮುಲುಂಡ್ ಸೇರಿದಂತೆ 5 ಟೋಲ್ ಪ್ಲಾಜಾಗಳಿವೆ. ಇಂದು ಮಧ್ಯರಾತ್ರಿ 12 ಗಂಟೆಯ ನಂತರ ಲಘು ವಾಹನಗಳಿಗೆ ಟೋಲ್ ವಿನಾಯಿತಿ ನೀಡಲು ಸರ್ಕಾರ ನಿರ್ಧರಿಸಿದೆ.
ಈ ಮೂಲಕ ವಾಹನ ಸವಾರರು ಸರತಿ ಸಾಲಿನಲ್ಲಿ ಕಳೆಯುವ ಸಮಯವನ್ನು ಉಳಿಸಲಾಗುತ್ತದೆ. ಈ ಬಗ್ಗೆ ಹಲವು ತಿಂಗಳಿಂದ ಸರ್ಕಾರ ಚರ್ಚೆ ನಡೆಸಿದ್ದು, ಇಂದು ಈ ನಿರ್ಧಾರ ಕೈಗೊಳ್ಳಲಾಗಿದೆ.