Published
2 months agoon
By
Akkare Newsಪುತ್ತೂರು : ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ನವರಾತ್ರಿ ಉತ್ಸವದ ಅಂಗವಾಗಿ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ದಿನಾಂಕ 10 ಅಕ್ಟೋಬರ್ 2024ರಂದು ‘ಶುಕ್ರ ಸಂಜೀವಿನಿ’ ಎಂಬ ತಾಳಮದ್ದಳೆ ಶ್ರೀ ದೇವಳದಲ್ಲಿ ಜರಗಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಭವ್ಯ ಶ್ರೀ ಕುಲ್ಕುಂದ ಹಾಗೂ ಚೆಂಡೆ ಮದ್ದಲೆಗಳಲ್ಲಿ ಪಿ.ಟಿ. ಜಯರಾಮ ಭಟ್, ಮುರಳೀಧರ ಕಲ್ಲೂರಾಯ, ಮಾಸ್ಟರ್ ಅಮೋಘ ಶಂಕರ್ ಹಾಗೂ ಮಾಸ್ಟರ್ ಅಭಯಕೃಷ್ಣ ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ ಬಾರ್ಯ (ಶುಕ್ರಾಚಾರ್ಯ), ಭಾಸ್ಕರ ಶೆಟ್ಟಿ ಸಾಲ್ಮರ (ಕಚ), ನಾ. ಕಾರಂತ ಪೆರಾಜೆ (ದೇವಯಾನಿ), ಗೋಪಾಲ ಶೆಟ್ಟಿ ಕಳೆಂಜ (ವೃಷಪರ್ವ), ಗಣರಾಜ್ ಭಟ್ ಬಡೆಕ್ಕಿಲ (ಧೂಮಕೇತ) ಸಹಕರಿಸಿದರು. ಶಿವಪ್ರಸಾದ್ ರೈ ಮತ್ತು ಮುರಳೀಧರ ರೈ ಮಠಂತಬೆಟ್ಟು ಕಲಾವಿದರನ್ನು ಗೌರವಿಸಿದರು. ದಿವಂಗತ ಶ್ರೀನಿವಾಸ ರೈ ಅವರ ಪತ್ನಿ ಶ್ರೀಮತಿ ಸವಿತಾ ಎಸ್. ರೈ ಹಾಗೂ ಮನೆಯವರು ಉಪಸ್ಥಿತರಿದ್ದರು.