ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಜನ ಸಂಚಾರದಿಂದ 50 ಮೀ. ಅಂತರದಲ್ಲಿ ಪಟಾಕಿ ಮಳಿಗೆ

Published

on

ಪುತ್ತೂರು, ಕಡಬದಲ್ಲಿ 5 ಕಡೆ 69 ಪಟಾಕಿ ಮಳಿಗೆಗೆ ಸ್ಥಳ ಗುರುತು

ಪುತ್ತೂರು:ಅ.31ರಿಂದ ನ.2ರ ತನಕ ನಡೆಯುವ ದೀಪಾವಳಿ ಹಬ್ಬದ ಸಮಯದಲ್ಲಿ ಸಂಭವಿಸಬಹುದಾದ ಅಗ್ನಿ ಅಪಘಾತ ಹಾಗು ಇತರ ಅನಾಹುತಗಳನ್ನು ತಡೆಗಟ್ಟಲು ಹಾಗು ನಿಭಾಯಿಸಲು ರಾಜ್ಯ ಅಗ್ನಶಾಮಕ ದಳ ಸುತ್ತೋಲೆ ಹೊರಡಿಸಿದ್ದು ಪುತ್ತೂರು ಮತ್ತು ಕಡಬದಲ್ಲಿ ಜನ ಸಂಚಾರ ಪ್ರದೇಶದಿಂದ 50 ಮೀಟರ್ ಅಂತರದಲ್ಲಿ ಪಟಾಕಿ ಸ್ಟಾಲ್ ಇರಿಸಲು ಸೂಚನೆ ನೀಡಿದೆ. ಪುತ್ತೂರು ಮತ್ತು ಕಡಬದಲ್ಲಿ 5 ಕಡೆ 69 ಪಟಾಕಿ ಮಳಿಗೆಗಳಿಗೆ ಅವಕಾಶವಿದೆ ಎಂದು ಸುತ್ತೋಲೆಯಲ್ಲಿ ತಿಳಿಸಿದೆ.

 

ಈಗಾಗಲೇ ಪಟಾಕಿ ಸ್ಟಾಲ್ ಅಳವಡಿಸಲು ಅನುಮತಿ ಕೋರಿ ಹಲವು ಅರ್ಜಿಗಳು ಅಗ್ನಿಶಾಮಕ ಇಲಾಖೆಗೆ ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ, ಪುತ್ತೂರು ಮತ್ತು ಕಡಬ ತಹಸೀಲ್ದಾರ್ ಅವರೊಂದಿಗೆ ಸ್ಥಳ ಪರಿಶೀಲಿಸಿದ್ದಾರೆ.ಜೊತೆಗೆ ಸೂಕ್ತ ಮತ್ತು ಸೂಕ್ತವಲ್ಲದ ಮೈದಾನಗಳ ವಿವರಣೆ ನೀಡಿದ್ದಾರೆ. ಪುತ್ತೂರಿನ ಕಿಲ್ಲೆ ಮೈದಾನದಲ್ಲಿ 4 ಪಟಾಕಿ ಮಳಿಗೆ, ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ 20ರಿಂದ 25 ಪಟಾಕಿ ಮಳಿಗೆ, ಕಡಬ ತಾಲೂಕಿನ ಆಲಂಕಾರು ದುರ್ಗಾಂಬಿಕ ಪದವಿ ಪೂರ್ವಕಾಲೇಜು ಎದುರು ಮೈದಾನದಲ್ಲಿ 5ರಿಂದ 10 ಪಟಾಕಿ ಮಳಿಗೆ, ರಾಮಕುಂಜದಲ್ಲಿ 10ರಿಂದ 15 ಮಳಿಗೆ, ಕಡಬ ಪೆಟ್ರೋಲ್ ಪಂಪ್ ಎದುರಿನ ತೆರೆದ ಮೈದಾನದಲ್ಲಿ 10ರಿಂದ 15 ಪಟಾಕಿ ಮಳಿಗೆ ನಿರ್ಮಾಣಕ್ಕೆ ಅವಕಾಶವಿದೆ.

 

 

 

 

ಕಡಬ ಪೇಟೆಯ ಸಂತೆಕಟ್ಟೆ ಕಾಲೇಜು ಕ್ರಾಸ್ ರಸ್ತೆಯಲ್ಲಿ ಮತ್ತು ಕಡಬ ಹಳೆ ಸ್ಟೇಷನ್ ಬಳಿ ಪಟಾಕಿ ಮಳಿಗೆಗೆ ಸ್ಥಳ ಸೂಕ್ತವಾಗಿಲ್ಲ ಎಂದು ಅಧಿಕಾರಿಗಳು ಪರಿಶೀಲನೆ ಮಾಡಿ
ವರದಿ ಸಲ್ಲಿಸಿದ್ದಾರೆ.? ಅಂಗಡಿಗಳಲ್ಲಿ ನಿಷೇಧ ಈ ಬಾರಿ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು ಯಾವುದೇ ಅಂಗಡಿಗಳಲ್ಲಿ ಪಟಾಕಿ ಮಾರಾಟ ಮಾಡುವಂತಿಲ್ಲ.ಈಗಾಗಲೇ ಖಾಯಂ ಅಂಗಡಿಗಳಲ್ಲಿಯೂ ಪಟಾಕಿ ಮಾರಾಟ ಮಾಡಲು ಅಗ್ನಿಶಾಮಕ ಇಲಾಖೆಯಿಂದ ಅನುಮತಿ ನೀಡಿಲ್ಲ ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement