Published
2 months agoon
By
Akkare Newsಪುತ್ತೂರು ಜನತೆಯ ಕಾರ್ಯಕ್ರಮ, ಪ್ರತೀಯೊಬ್ಬರೂ ಭಾಗವಹಿಸಿ: ಕಾವು ಹೇಮನಾಥ ಶೆಟ್ಟಿ
ಪುತ್ತೂರು: ದೀಪಾವಳಿ ಪ್ರಯುಕ್ತ ಪುತ್ತೂರು ಶಾಸಕರಾದ ಅಶೋಕ್ ರೈಯವರು ನಡೆಸುವ ವಸ್ತ್ರದಾನ ಮತ್ತು ಸಹಭೋಜನ ಕಾರ್ಯಕ್ರಮ ಪುತ್ತೂರಿನ ಜನತೆಯ ಕಾರ್ಯಕ್ರಮವಾಗಿದ್ದು ಇದರಲ್ಲಿ ಪ್ರತೀಯೊಬ್ಬರೂ ಭಾಗವಹಿಸುವ ಮೂಲಕ ಶಾಸಕರಿಗೆ ಆಶೀರ್ವಾದ ಮಾಡಬೇಕು ಎಂದು ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಹೇಳಿದರು.
ಅವರು ಕಾವು ಮಾಡ್ನೂರು ಕಾಲನಿಯಲ್ಲಿ ನಡೆದ ಅಶೋಕ ಜನ-ಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಡವ, ಬಲ್ಲಿದ, ಜಾತಿ, ಧರ್ಮಗಳ ಬೇಧವಿಲ್ಲದೆ ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಕಳೆದ ಬಾರಿ ಕಾರ್ಯಕ್ರಮ ನಡೆದ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲೇ ಈ ಬಾರಿಯೂ ಕಾರ್ಯಕ್ರಮ ನಡೆಯಲಿದೆ. ಸುಮಾರು 75 ಸಾವಿರಕ್ಕೂ ಮಿಕ್ಕಿ ಬಾಂಧವರು ಭಾಗವಹಿಸಲಿದ್ದಾರೆ ಎಂದು ಹೇಮನಾಥ ಶೆಟ್ಟಿ ಹೇಳಿದರು.
ಅಕ್ರಮ ಸಕ್ರಮ ಸಮಿತಿಯ ಸದಸ್ಯರಾದ ಮಹಮ್ಮದ್ ಬಡಗನ್ನೂರು ಮಾತನಾಡಿ ಕಾರ್ಯಕ್ರಮದ ಬಗ್ಗೆ ಮನೆ ಮನೆಗೂ ತಿಳಿಸುವ ಕೆಲಸ ನಡೆಯುತ್ತಿದೆ. ಗ್ರಾಮದ ಪ್ರತೀಯೊಬ್ಬರಿಗೂ ಆಹ್ವಾನ ನೀಡಲಾಗುತ್ತಿದ್ದು ಎಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ವಿನಂತಿಸಿದರು.
ಕಾರ್ಯಕ್ರಮದಲ್ಲಿ ಜಿ.ಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಗ್ರಾ.ಪಂ ಸದಸ್ಯರಾದ ದಿವ್ಯನಾಥ ಶೆಟ್ಟಿ ಕಾವು.ಟ್ರಸ್ಟ್ ನ ಯೋಗೀಸ್ ಸಾಮಾನಿ, ಸತೀಶ್ ರೈ ನಿಡ್ಪಳ್ಳಿ ಮೊದಲಾದವರು ಉಪಸ್ಥಿತರಿದ್ದರು. ಗ್ರಾಮದ ಉಜ್ರುಗುಳಿ ಮತ್ತು ಮಾಡಂದೂರು ಕಾಲನಿ, ತೋಟದ ಮೂಲೆ ಕಾಲನಿಯಲ್ಲಿ ಪ್ರಚಾರ ಸಭೆ ನಡೆಯಿತು.