Published
2 weeks agoon
By
Akkare Newsಪುತ್ತೂರು; ಪುತ್ತೂರು ತಾಲೂಕಿನ ವಿವಿಧ ಸರಕಾರಿ ಹಿ.ಪ್ರಾ ಶಾಲೆಗಳಿಗೆ ಒಟ್ಟು 30.80ಲಕ್ಷ ರೂ ಅನುದಾನವನ್ನು ಸರಕಾರ ಬಿಡುಗಡೆ ಮಾಡಿದೆ. ಪುತ್ತೂರು ಶಾಸಕರಾದ ಅಶೋಕ್ ರೈ ಅವರ ಮನವಿಯಂತೆ ಶಾಲಾ ಕಟ್ಟಡ ದುರಸ್ಥಿಗೆ ಈ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.ಕಳೆದ ಹಲವು ವರ್ಷಗಳಿಂದ ನಾ ದುರಸ್ಥಿಯಲ್ಲಿರುವ ಅಗತ್ಯ ದುರಸ್ಥಿ ಶಾಲೆಗಳನ್ನು ಮೊದಲ ಪಟ್ಟಿಯಲ್ಲಿ ಆದ್ಯತೆ ಮೇರೆಗೆ ಆಯ್ಕೆ ಮಾಡಿ ಅನುದಾನವನ್ನು ನೀಡಲಾಗಿದೆ.
ಅನುದಾನ ಬಿಡುಗಡೆಗೊಂಡ ಶಾಲೆಗಳ ವಿವರ;
ಸರಕಾರಿ ಹಿ ಪ್ರಾ ಶಾಲೆ ಇಷ್ಟೊಟ್ಟು 2 ಲಕ್ಷ, ಸ.ಹಿ.ಪ್ರಾಶಾಲೆ ನೆಲ್ಲಿಕಟ್ಟೆ 2 ಲಕ್ಷ, ಸಹಿಪ್ರಾಶಾಲೆ ಹಾರಾಡಿ 2 ಲಕ್ಷ, ಸರಕಾರಿ ಹಿ.ಪ್ರಾ.ಶಾಲೆ ಬೆಳಂದೂರು 2ಲಕ್ಷ, ಸರಕಾರಿ ಹಿ ಪ್ರಾ ಶಾಲೆ
ಬಡಗನ್ನೂರು 1.5 ಲಕ್ಷ, ಸರಕಾರಿ ಹಿ.ಪ್ರಾ.ಶಾಲೆ ಪರ್ಪುಂಜ 1.5ಲಕ್ಷ, ಸರಕಾರಿ ಹಿ.ಪ್ರಾ ಶಾಲೆ ಸಜಂಕಾಡಿ 1.5 ಲಕ್ಷ, ಸರಕಾರಿ ಹಿ.ಪ್ರಾ.ಶಾಲೆ ದೂಮಡ್ಕ 2 ಲಕ್ಷ, ಸರಕಾರಿಹಿ.ಪ್ರಾ.ಶಾಲೆ ಮಾಡನ್ನೂರು 0.60 ಸಾವಿರ, ಹಿ ಪ್ರಾ ಶಾಲೆ ಸಾಮೆತ್ತಡ್ಕ 2 ಲಕ್ಷ ಸರಕಾರಿ ಪ್ರೌಢ ಶಾಲೆ ಇರ್ದೆ ಉಪ್ಪಳಿಗೆ 1.50 ಲಕ್ಷ, ಹಿ ಪ್ರಾ ಶಾಲೆ ಕುರಿಯ 10 ಸಾವಿರ, ಸರಕಾರಿಹಿಪ್ರಾ ಶಾಲೆ ಕುಟನೋಪ್ಪಿನಡ್ಕ 2 ಲಕ್ಷ, ಸರಕಾರಿ ಹಿ.ಪ್ರಾ ಶಾಲೆ ತಿಂಗಳಾಡಿ 2 ಲಕ್ಷ, ಹಿ.ಪ್ರಾ ಶಾಲೆ ಸರ್ವೆ 2 ಲಕ್ಷ, ಹಿ.ಪ್ರಾ ಶಾಲೆ ತೆಗ್ಗು 2 ಲಕ್ಷ, ಹಿ.ಪ್ರಾ ಶಾಲೆ ಮಿತ್ತಡ್ಕ 10 ಸಾವಿರ, ಹಿ ಪ್ರಾ ಶಾಲೆ ಶಾಂತಿಗೋಡು 2 ಲಕ್ಷ, ಸರಕಾರಿ ಪ್ರೌಢ ಶಾಲೆ ಉಪ್ಪಿನಂಗಡಿ 2 ಲಕ್ಷ ರೂ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.
ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಲವು ಶಾಲೆಗಳು ನಾ ದುರಸ್ತಿಯಲ್ಲಿದೆ. ಇವುಗಳ ಪೈಕಿ ತೀರಾ ಅಗತ್ಯವಿರುವ ಶಾಲೆಗಳಿಗೆ ಮೊದಲ ಹಂತದ ಅನುದಾನ ಬಿಡುಗಡೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಉಳಿದ ಅಗತ್ಯ ನೆರವು ಬೇಕಾಗಿರುವ ಶಾಲೆಗಳಿಗೆ ಅನುದಾವನ್ನು ಒದಗಿಸಲಾಗುತ್ತದೆ. ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯನ್ನು ನೀಗಿಸಲಾಗಿದ್ದು ಇದರ ಜೊತೆಗೆ ಕಟ್ಟಡದ ದುರಸ್ಥಿ ಬೇಡಿಕೆಗೂ ಮನ್ನಣೆಯನ್ನು ಸರಕಾರ ನೀಡಿದೆ.
ಅಶೋಕ್ ಕುಮಾರ್ ರೈ, ಶಾಸಕರು ಪುತ್ತೂರು