Published
2 months agoon
By
Akkare Newsಲಿಟ್ಲ್ ಫ್ಲವರ್ ಶಾಲೆಯ ಕಬಡ್ಡಿ ಆಟಗಾರ್ತಿಯರು ಸುಳ್ಯ ತಾಲ್ಲೂಕಿನ ಗುತ್ತಿಗಾರಿನಲ್ಲಿ ನಡೆದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ವಿಜೇತರಾಗಿ ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿ, ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನಲ್ಲಿ ನಡೆದ ಮೈಸೂರು ವಿಭಾಗ ಹಾಗೂ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟದ ಪಥ ಸಂಚಲನದಲ್ಲಿ ಭಾಗವಹಿಸಿದ, ದಕ್ಷಿಣ ಕನ್ನಡ ಹಾಗೂ ಮೈಸೂರು ವಿಭಾಗವನ್ನು ಪ್ರತಿನಿಧಿಸಿದ ಪುತ್ತೂರು ಲಿಟ್ಲ್ ಫ್ಲವರ್ ಶಾಲೆಯ ತಂಡ ಧರಿಸಿದ ಅಪ್ಪರ್ ಮತ್ತು ಲೊವರ್ ನ್ನು ಪುತ್ತೂರಿನ ಮಾನ್ಯ ಶಾಸಕರಾದ ಸನ್ಮಾನ್ಯ ಅಶೋಕ್ ರೈ ನೀಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ.
ರಾಜ್ಯ, ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದಾಗ್ಲೂ ಮಾಹಿತಿ ಪಡೆದುಕೊಂಡು ಶುಭ ಹಾರೈಸಿ. ಎಲ್ಲಾ ಮಕ್ಕಳನ್ನು ಟ್ರಸ್ಟ್ ವತಿಯಿಂದ ಗೌರವಿಸುದಾಗಿ ಹೇಳಿ ಮಕ್ಕಳಿಗೆ ಶುಭ ಹಾರೈಸಿದ ಮಾನ್ಯ ಶಾಸಕರ ಕ್ರೀಡಾ ಸ್ಫೂರ್ತಿಗೆ ಒಂದು ಸಲ್ಯೂಟ್.ಶಾಲಾ ವತಿಯಿಂದ ಮಾನ್ಯ ಶಾಸಕರಿಗೆ ಕೃತಜ್ಞತೆಗಳನ್ನು ಸಮರ್ಪಪಿಸುತಿದ್ದೇವೆ.