Published
2 months agoon
By
Akkare Newsಬ ಳ್ಳಾರಿ: ವಾಲ್ಮೀಕಿ ನಿಗಮ ಹಗರಣ ರಾಜ್ಯದ ಕಾಂಗ್ರೆಸ್ ಸರ್ಕಾರ ಮುಜುಗರಕ್ಕೀಡು ಮಾಡುವಂತೆ ಮಾಡಿತ್ತು. ಈ ಪ್ರಕರಣದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದಲ್ಲಿ ಪ್ರತಿಭಟನೆಗಳೂ ನಡೆದಿತ್ತು. ಆದರೆ ವಿಜಯೇಂದ್ರಗೇ ಹಗರಣದ ಹಣದ ಪಾಲು ಹೋಗಿದೆ ಎಂದು ಬಿಜೆಪಿ ನಾಯಕ ಶ್ರೀರಾಮುಲು ಹೇಳಿಕೆ ನೀಡಿ ಎಡವಟ್ಟು ಮಾಡಿದ್ದಾರೆ.
ಸಂಡೂರು ಉಪಚುನಾವಣೆ ಪ್ರಚಾರ ಸಮಾವೇಶದಲ್ಲಿ ಬಿ ಶ್ರೀರಾಮುಲು ಮಾತನಾಡುವಾಗ ವೇದಿಕೆಯಲ್ಲಿ ವಿಜಯೇಂದ್ರ ಕೂಡಾ ಇದ್ದರು. ಈ ವೇಳೆ ಅವರ ಎದುರೇ ವಾಲ್ಮೀಕಿ ನಿಗಮ ಹಗರಣದಲ್ಲಿ ಕೋಟ್ಯಾಂತರ ರೂಪಾಯಿ ಹಣ ಕೊಳ್ಳೆ ಹೊಡೆದಿದ್ದಾರೆ. ವಿಜಯೇಂದ್ರಗೂ ಹಣದ ಪಾಲು ಹೋಗಿದೆ ಎಂದು ಎಡವಟ್ಟು ಮಾಡಿದರು.
ಬಳ್ಳಾರಿ ಸಂಸದ ಇ ತುಕರಾಂ ಎನ್ನುವ ಬದಲು ಶ್ರೀರಾಮುಲು ಬಾಯ್ತಪ್ಪಿ ವಿಜಯೇಂದ್ರ ಹೆಸರು ಹೇಳಿದರು. ಆದರೆ ಶ್ರೀರಾಮುಲು ಎಡವಟ್ಟು ಮಾಡಿದ್ದನ್ನು ಅರಿತ ಅಲ್ಲಿದ್ದವರು ತುಕರಾಂ ಎಂದು ತಿದ್ದಿದರು. ತಕ್ಷಣವೇ ಸಾವರಿಸಿಕೊಂಡ ಶ್ರೀರಾಮುಲು ತಪ್ಪು ಸರಿಪಡಿಸಿಕೊಂಡು ತುಕರಾಂಗೂ ಪಾಲು ಹೋಗಿದೆ ಎಂದರು. ವೇದಿಕೆಯಲ್ಲಿದ್ದ ಬಿವೈ ವಿಜಯೇಂದ್ರ ಈ ಮಾತು ಕೇಳಿಸಿಕೊಂಡು ಕಿರುನಗೆ ನಕ್ಕರು.
ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲ್ಲಲೇಬೇಕು ಎಂದು ಪಣತೊಟ್ಟು ಬಿಜೆಪಿ ಅಭ್ಯರ್ಥಿ ಪರವಾಗಿ ಶ್ರೀರಾಮುಲು ಮತ್ತು ಜನಾರ್ಧನ ರೆಡ್ಡಿ ಜೊತೆಯಾಗಿ ನಿಂತು ಪ್ರಚಾರ ನಡೆಸುತ್ತಿದ್ದಾರೆ. ಇದರ ನಡುವೆ ಈ ಎಡವಟ್ಟು ಎಲ್ಲರ ನಗೆಪಾಟಲಿಗೀಡಾಗಿದೆ.