ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನವೆಂಬರ್ 8 ರಂದು ಕನ್ನಡ ಜ್ಯೋತಿ ರಾಥಯಾತ್ರೆ ಪುತ್ತೂರಿಗೆ ಆಗಮನ

Published

on

ಇದೇ ಬರುವ ಡಿಸೆಂಬರ್ 20, 21, 22, ರಂದು ಮಂಡ್ಯದಲ್ಲಿ ನಡೆಯುವ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಕುರಿತಾಗಿ ಅರಿವು ಮೂಡಿಸುವ ನಿಟ್ಟಿನಲ್ಲಿ ಹಾಗೂ ಸಮ್ಮೇಳನದಲ್ಲಿ ಕನ್ನಡ ಪ್ರೇಮಿಗಳು ಭಾಗಿಯಾಗುವ ನಿಟ್ಟಿನಲ್ಲಿ ಕನ್ನಡ ಜ್ಯೋತಿ ಹೊತ್ತ ಕನ್ನಡ ಭುವನೇಶ್ವರಿಯ ರಥವು ನವೆಂಬರ್ 8 ರಂದು ಶುಕ್ರವಾರ ಪುತ್ತೂರಿಗೆ. ಆಗಮಿಸಲಿದೆ.ನವೆಂಬರ್ 8 ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಕಬಕ ವೃತ್ತದ ಬಳಿ ಸಕಲ. ಸರಕಾರಿ ಗೌರವಗಳೊಂದಿಗೆ ರಥವನ್ನು ಸ್ವಾಗತಿಸಿ,ಅಲ್ಲಿಂದ ಮೆರವಣಿಗೆ ಮೂಲಕ ಸಂಚರಿಸಿ, ಮುಖ್ಯ ರಸ್ತೆಯಾಗಿ ಶ್ರೀಧರ್ ಭಟ್ ಅಂಗಡಿಯಿಂದ ಆಡಳಿತ ಸೌಧಕ್ಕೆ ಮಧ್ಯಾಹ್ನ ಸುಮಾರು 12:30 ಕ್ಕೆ ತಲುಪಲಿದೆ. ಬಳಿಕ ಮಾನ್ಯ ಸಹಾಯಕ ಆಯುಕ್ತರು, ತಹಸಿಲ್ದಾರ್, ತಾಲೂಕ್ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳು, ಪೌರಾಯುಕ್ತರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪುತ್ತೂರು ಪೊಲೀಸ್ ಇಲಾಖೆ , ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ರೋಟರಿ ಸಂಸ್ಥೆಗಳು , ಲಯನ್ಸ್, ಜೆ ಸಿ ಐ,ಇನ್ನರ್ವಿಲ್, ಹಾಗೂ ಇನ್ನಿತರ ಸಂಘ ಸಂಸ್ಥೆಗಳು , ಕನ್ನಡ ಪ್ರೇಮಿಗಳು ಸೇರಿ ರಥವನ್ನು ಸ್ವಾಗತಿಸಲಿದ್ದಾರೆ.


 

.ಮಾನ್ಯ ಸಹಾಯಕ ಆಯುಕ್ತರು ಈ ರಥಕ್ಕೆ ಚಾಲನೆಯನ್ನು ನೀಡಲಿದ್ದು, ಬಳಿಕ ಕೋರ್ಟು ರಸ್ತೆಯಾಗಿ ಎಪಿಎಂಸಿ ರಸ್ತೆ ಮೂಲಕ ಬೆಳ್ತಂಗಡಿಗೆ ಪುತ್ತೂರು ತಾಲೂಕು ಸರಹದ್ದು ತನಕ ಈ ಕನ್ನಡ ರಥವನ್ನು ಬೀಳ್ಕೊಡಲಾಗುವುದು.

 

 

 

ಎಲ್ಲಾ ಕನ್ನಡ ಪ್ರೇಮಿಗಳು ಪುತ್ತೂರಿನ ಎಲ್ಲ ಸಂಘ ಸಂಸ್ಥೆಗಳು,ಕನ್ನಡಪರ ಸಂಘಟನೆಗಳು, ಸಾರ್ವಜನಿಕರು ಈ ಕನ್ನಡ ರಥವನ್ನು ಸ್ವಾಗತಿಸಲು ಭಾಗಿಯಾಗಬೇಕಾಗಿ ವಿನಂತಿ.

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement