Published
6 days agoon
By
Akkare Newsಎ.ಸಿ ಹರ್ಷವರ್ಧನ್ ನೇತ್ರತ್ವದ ತಂಡದಿಂದ ದಾಳಿ, ಹಲವಾರು ದೋಣಿ ವಶ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ವಿರುದ್ಧ ಇಲಾಖೆ ತೊಡೆ ತಟ್ಟಿದ್ದು, ಮಂಗಳೂರು ಸಹಾಯಕ ಆಯುಕ್ತರಾದ ಹರ್ಷವರ್ಧನ್ ನೇತ್ರತ್ವದಲ್ಲಿ ಮಂಗಳೂರು ಹಾಗೂ ಬಂಟ್ವಾಳ ತಹಶೀಲ್ದಾರರ ತಂಡ ಅಕ್ರಮ ಮರಳುಗಾರಿಕೆ ಅಡ್ಡೆಗಳ ಮೇಲೆ ದಾಳಿ ನಡೆಸಿರುವ ಘಟನೆಗಳು ವರದಿಯಾಗಿವೆ. ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಮಂಗಳೂರು -ಬಂಟ್ವಾಳ ಸುತ್ತಮುತ್ತಲಿನ ನದಿಗಳಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಮೇಲೆ ದಾಳಿ ನಡೆಸಿದ್ದಾರೆ. ಗುರುಪುರ, ಅಡ್ಡೂರು, ಉಳಾಯಿಬೆಟ್ಟು ಪ್ರದೇಶಗಳಲ್ಲಿ ದಾಳಿ ನಡೆಸಿರುವುದಾಗಿ ತಿಳಿದುಬಂದಿದೆ.
ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ಅಧಿಕಾರಿಗಳು ದಾಳಿ ನಡೆಸಿ ದೋಣಿಗಳನ್ನು ವಶಪಡಿಸಿದ್ದಾರೆ. ಗಣಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಫಲ್ಗುಣಿ ನದಿಯಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದ ಸ್ಥಳಕ್ಕೆ ದಿಡೀರ್ ದಾಳಿ ಮಾಡಿ ಸ್ಥಳದಲ್ಲಿದ್ದ 9 ದೋಣಿಗಳನ್ನು ವಶಪಡಿಸಿಕೊಂಡರು.
ಅಕ್ರಮ ಮರಳುಗಾರಿಕೆ ನಡೆಸಲು ಉಪಯೋಗಿಸುತ್ತಿದ್ದ ಏಳು ದೋಣಿಗಳನ್ನು ನೀರಿನ ಅಡಿಯಲ್ಲಿ ಮುಳುಗಿಸಿಟ್ಟಿರುವುದು ದಾಳಿ ಸಂದರ್ಭದಲ್ಲಿ ಪತ್ತೆಯಾಗಿದೆ.
ಮಂಗಳೂರು ಉಪ-ವಿಭಾಗಾಧಿಕಾರಿ ಹರ್ಷವರ್ಧನ್ ರವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಮಂಗಳೂರು, ಬಂಟ್ವಾಳ ತಹಶೀಲ್ದಾರರು, ಗಣಿ ಮತ್ತು ಇಲಾಖೆ ಭೂವಿಜ್ಞಾನ ಇಲಾಖೆ, ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತಿತರರು ಪಾಲ್ಗೊಂಡಿದ್ದರು.
ಬಂಟ್ವಾಳ, ಅಕ್ರಮ ಮರಳು ಅಡ್ಡೆಗಳ ಮೇಲೆ ದಾಳಿ..!!! ಪುತ್ತೂರಿನ ಅನೇಕ ಭಾಗದಲ್ಲಿ ಕೂಡ ಅಕ್ರಮ ಮರಳು ಗಾರಿಕೆ ನಡೆಯುತ್ತಿದ್ದೂ,ಸಂಬಂಧ ಪಟ್ಟ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತುಕೊಳ್ಳಲು ಕಾರಣವಾದರೂ ಏನು..? ಎಂದು ಸಾರ್ವಜನಿಕರು ಮಾತನಾಡುತ್ತಿದ್ದಾರೆ. ಇನ್ನಷ್ಟು ವಿವರಗಳನ್ನು ಮುಂದಿನ ವರದಿಯಲ್ಲಿ ನೀಡಲಾಗುವುದು.