Published
1 month agoon
By
Akkare Newsರಾಜ್ಯದಲ್ಲಿ ಶಿಕ್ಷಣ ಮತ್ತು ಸರ್ಕಾರಿ ಸೇವೆಗಳಲ್ಲಿ ಪರಿಶಿಷ್ಟ ಜಾತಿಯ ವಿವಿಧ ಉಪಜಾತಿಗಳಿಗೆ ಸೇರಿದವರ ಪ್ರಾತಿನಿಧ್ಯ ಕುರಿತು ಪರಿಶೀಲನಾರ್ಹ ದತ್ತಾಂಶ (ಎಂಫರಿಕಲ್ ಡಾಟಾ) ಪಡೆದು, ಒಳ ಮೀಸಲಾತಿ ಬಗ್ಗೆ ಎರಡು ತಿಂಗಳ ಒಳಗೆ ಆಯೋಗವು ವರದಿ ಸಲ್ಲಿಸಬೇಕಿದೆ.
ಒಳ ಮೀಸಲಾತಿ ಕುರಿತು ಪರಿಶೀಲಿಸುವ ಸಲುವಾಗಿ ಆಯೋಗ ರಚಿಸಲು ಅಗಸ್ಟ್ 24ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿತ್ತು.
ಒಳಮೀಸಲಾತಿ ಜಾರಿಗೆ ಪರಿಶಿಷ್ಟ ಜಾತಿಯಲ್ಲಿರುವ ಉಪಜಾತಿಗಳ ಜನಸಂಖ್ಯೆಯ ಎಂಫರಿಕಲ್ ಡಾಟಾ ಅಗತ್ಯವಿದೆ. ಸದ್ಯ 2011ರ ಜನಗಣತಿಯ ಅಂಕಿಅಂಶ ಮಾತ್ರ ಅಧಿಕೃತ. ಆದರೆ, ಅದರಲ್ಲಿ ಉಪ ಜಾತಿಗಳ ಅಂಕಿಅಂಶ ಇಲ್ಲ. ಪರಿಶೀಲನಾತ್ಮಕ ದತ್ತಾಂಶವಾಗಿ ಯಾವುದನ್ನು ಪರಿಗಣಿಸಬೇಕು ಎಂಬ ಬಗ್ಗೆಯೂ ಚರ್ಚೆ ನಡೆದಿದೆ.
ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಐದು ಪ್ರಮುಖ ಇಲಾಖೆಗಳ ಕಾಮಗಾರಿಗಳಲ್ಲಿ ಶೇ 40ರಷ್ಟು ಕಮಿಷನ್ ಪಡೆಯಲಾಗುತ್ತಿತ್ತು ಎಂಬ ಆರೋಪದ ಕುರಿತು ತನಿಖೆ ನಡೆಸುವ ಆಯೋಗದ ನೇತೃತ್ವನ್ನೂ ವಹಿಸಿದ್ದಾರೆ. ಈ ಆಯೋಗವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ 2023ರ ಆಗಸ್ಟ್ 5ರಂದು ರಚಿಸಿದೆ.
ಇದಕ್ಕೂ ಮುನ್ನ, ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆ ಹಾಗೂ ಪರಿಶಿಷ್ಟ ಪಂಗಡದವರ ಮೀಸಲಾತಿ ಹೆಚ್ಚಳದ ಕುರಿತು ವರದಿ ನೀಡಲೂ ಕೂಡ ನ್ಯಾ. ನಾಗಮೋಹನದಾಸ್ ಅವರ ನೇತೃತ್ವದಲ್ಲಿಯೇ ಸಮಿತಿ ರಚಿಸಲಾಗಿತ್ತು.