Published
1 month agoon
By
Akkare Newsಪುತ್ತೂರು: ರಸ್ತೆ ಸಂಪೂರ್ಣ ಹದಗೆಟ್ಟಿರುವ ಹಿನ್ನಲೆಯಲ್ಲಿ ನ. 23 ರಂದು ಅರಿಯಡ್ಕ ಗ್ರಾಮ ಪಂಚಾಯತ್ ನ ಉಪಚುನಾವಣೆಯನ್ನು ಬಹಿಷ್ಕರಿಸುವ ನಿರ್ಧಾರವನ್ನು ಗ್ರಾಮಸ್ಥರು ತಳೆದಿದ್ದಾರೆ.
ಕಾವು- ಅಶ್ವತ್ತಡಿ-ಸಸ್ಪೆಟ್ಟಿ-ಪಳನೀರು- ಸಾಂತ್ಯ ಮೂಲಕ ಈಶ್ವರ ಮಂಗಲವನ್ನು ಸಂಪರ್ಕಿಸುವ ಕಚ್ಚಾರಸ್ತೆಯ ಕಾಂಕ್ರೀಟಿಕರಣಕ್ಕೆ ಕಳೆದ ಹತ್ತು ವರ್ಷಗಳಿಂದಲೂ ಹೆಚ್ಚು ಸಮಯದಿಂದ ಈ ಭಾಗದ ಸಾರ್ವಜನಿಕರು ಸ್ಥಳೀಯ ಜನಪ್ರತಿನಿಧಿಗಳಿಂದ ಹಿಡಿದು ಶಾಸಕರವರೆಗೂ ಮನವಿ ನೀಡುವ ಮೂಲಕ ಬೇಡಿಕೆ ಇಟ್ಟಿದ್ದರು. ಆದರೆ ಕಾಂಕ್ರೀಟಿಕರಣ ಬಿಡಿ ಕನಿಷ್ಠ ದುರಸ್ತಿಯೂ ಇಲ್ಲದೆ ಈ ರಸ್ತೆಯಲ್ಲಿ ಸಂಚರಿಸುವುದೂ ದುಸ್ತರವಾಗಿದೆ.
ಆದುದರಿಂದ ಮುಂದಿನ ದಿನಗಳಲ್ಲಿ ಮೂರು ಕಿಲೋಮೀಟರ್ ಉದ್ದದ ಈ ಅಂತರ್ ಗ್ರಾಮವನ್ನು ಜೋಡಿಸುವ ರಸ್ತೆಯನ್ನು ಮೇಲ್ದರ್ಜೆಗೇರಿಸುವವರೆಗೆ ನಡೆಯುವ ಎಲ್ಲಾ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದೇವೆ.