Published
1 month agoon
By
Akkare Newsಹೆಬ್ರಿ: ಕಬ್ವಿನಾಲೆಯ ಸೀತಂಬೈಲುವಿನಲ್ಲಿ ಸೋಮವಾರ ರಾತ್ರಿ ಎಎನ್ಎಫ್ ಹಾಗೂ ನಕ್ಸಲರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ನಕ್ಸಲ್ ಮುಖಂಡ ವಿಕ್ರಂ ಗೌಡ ಸಾವಿಗೀಡಾಗಿದ್ದಾನೆ. ನಕ್ಸಲ್ ಓಡಾಟ ಕುರಿತು ಕಳೆದ 2-3 ತಿಂಗಳಿನಿಂದಲೂ ಭಾರೀ ಸಂಚಲನ ಉಂಟಾಗಿತ್ತು. ಇದೀಗ ಎನ್‌ಕೌಂಟರ್ ನಡೆಸುವುದರೊಂದಿಗೆ ನಕ್ಸಲರ ಓಡಾಟವೂ ದೃಢಪಟ್ಟಿದೆ. ಜೊತೆಗೆ ಕರ್ನಾಟಕದ ನಕ್ಸಲ್ ಮುಖಂಡನಾಗಿದ್ದ, ಹೆಬ್ರಿ ಮೂಲದ ವಿಕ್ರಂ ಗೌಡ ನಕ್ಸಲ್ ನಿಗ್ರಹ ದಳದ ಗುಂಡಿಗೆ ಹತನಾಗಿದ್ದಾನೆ.
ಕಾರ್ಕಳ, ಕೊಡಗು, ಸುಳ್ಯ, ಕೊಡಗು, ಚಿಕ್ಕಮಗಳೂರು ಪರಿಸರದಲ್ಲಿ ಕೆಲದಿನಗಳಿಂದ ನಕ್ಸಲ್ ಓಡಾಟ ಪತ್ತೆಯಾಗಿತ್ತು. ಈ ಹಿನ್ನಲೆಯಲ್ಲಿ ಎಎನ್ಎಫ್ ಕೂಂಬಿಂಗ್ ಬಿಗಿಗೊಳಿಸಿತ್ತು. ಸೋಮವಾರ ರಾತ್ರಿ 5 ಮಂದಿ ನಕ್ಸಲರ ತಂಡ ಸೀತಂಬೈಲು ಸಮೀಪ ರೇಷನ್ ಸಂಗ್ರಹಕ್ಕೆ ಬಂದಾಗ ಎಎನ್ಎಫ್ ತಂಡ ಕಾರ್ಯಾಚರಣೆ ನಡೆಸಿದೆ. ಈ ವೇಳೆ ದಾಳಿ-ಪ್ರತಿದಾಳಿ ನಡೆದಿದ್ದು, ದಾಳಿಗೆ ಸಿಲುಕಿ ವಿಕ್ರಂ ಗೌಡ ಬಲಿಯಾಗಿದ್ಸಾನೆ. ಉಳಿದ ನಾಲ್ವರು ಕಾಡಿನ ಹಾದಿಯಲ್ಲಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಸ್ಥಳೀಯರ ಜೊತೆಗೆ ಚರ್ಚಿಸಲು ಅವರು ಆಗಮಿಸಿದ್ದರು ಎಂದು ಅಂದಾಜಿಸಲಾಗಿದೆ.