ಇತ್ತೀಚಿನ ಸುದ್ದಿಗಳು ಊರಿನ ಸುದ್ದಿಗಳು ಕರ್ನಾಟಕ ಕಲೆ - ಸಾಹಿತ್ಯ ಕಾರ್ಯಕ್ರಮಗಳು ಕ್ರೀಡೆ ಚರ್ಚೆಗಳು ಚುನಾವಣೆ ಜೀವನಶೈಲಿ ತಂತ್ರಜ್ಞಾನ ಧಾರ್ಮಿಕ ಪ್ರಕಟಣೆ ಪ್ರತಿಭಾ ಪುರಸ್ಕಾರ ಮಂಗಳೂರು ಮನೋರಂಜನೆ ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ ರಾಷ್ಟ್ರೀಯ ಶುಭಾರಂಭ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಉಬಾರ್ ಕಂಬಳೋತ್ಸವಕ್ಕೆ ಇಂದು ಚಾಲನೆ; ಬೋಟಿಂಗ್, ಸಸ್ಯ ಮೇಳ, ಆಹಾರ ಮೇಳ, ಸಾಂಸ್ಕೃತಿಕ ವೈಭವ ಈ ಬಾರಿಯ ವಿಶೇಷಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಊರಿನ ಸುದ್ದಿಗಳು ಕರ್ನಾಟಕ ಕಾರ್ಯಕ್ರಮಗಳು ಕ್ರೀಡೆ ಚರ್ಚೆಗಳು ಚಿಣ್ಣರ ಲೋಕ ಜೀವನಶೈಲಿ ತಂತ್ರಜ್ಞಾನ ಪ್ರಕಟಣೆ ಪ್ರತಿಭಾ ಪುರಸ್ಕಾರ ಮಂಗಳೂರು ಮನೋರಂಜನೆ ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ ರಾಷ್ಟ್ರೀಯ ವಾಣಿಜ್ಯ ಶಾಲಾ ಚಟುವಟಿಕೆ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಮಾ.23:ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ ಮಾರ್ಗದರ್ಶನ ಕಾರ್ಯಗಾರ"ಕ್ಯಾರಿಯರ್ ಗೈಡ್ ಲೈನ್"Published
1 month agoon
By
Akkare Newsಪುತ್ತೂರು: ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ಬಾರಿಗೆ ಅಖಿಲ ಭಾರತ ಅಂತರ್ ವಿ.ವಿ ಪುರುಷರ 10ಕಿ.ಮೀ ಕ್ರಾಸ್ ಕಂಟ್ರಿ ಚಾಂಪಿಯನ್‌ಶಿಪ್ ನಡೆಯಿತು. ಸಂಜೆ ನಾಲ್ಕು ಗಂಟೆಗೆ ಕಾಲೇಜು ಕ್ರೀಡಾಂಗಣದಲ್ಲಿ ಕ್ರಾಸ್ ಕಂಟ್ರಿ ಓಟಕ್ಕೆ ಚಾಲನೆ ದೊರೆಯಿತು. ಇದರಲ್ಲಿ ಪ್ರಥಮ ಸ್ಥಾನಿಯಾಗಿ ಮುಂಬೈ ವಿವಿಯ ರಾಜ್ ತಿವಾರಿ ಹೊರಹೊಮ್ಮಿದರು.
ಒಟ್ಟು 10ಕಿ.ಮೀ ದೂರದ ಓಟವು ಕಾಲೇಜು ಕ್ರೀಡಾಂಗಣದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಲಕ್ಕೆ ಪ್ರವೇಶಿಸುವ ಕ್ರೀಡಾಳುಗಳು ಗಾಂಧಿಪಾರ್ಕ್ ಮೂಲಕ ಬ್ಯಾಂಕ್ ರಸ್ತೆಯಾಗಿ ಬಸ್ ನಿಲ್ದಾಣ ಬಳಿಯ ವೃತ್ತಕ್ಕೆ ತೆರಳಿ, ಅಲ್ಲಿ ತಿರುವು ಪಡೆದು ಮತ್ತೆ ಬೈಪಾಸ್ ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಪ್ರವೇಶ ಪಡೆದು ಹಿರೇಬಂಡಾಡಿ-ಕೊಯಿಲ ರಸ್ತೆಯ ಮೂಲಕ ಹಿರೇಬಂಡಾಡಿ ಜಂಕ್ಷನ್ ಬಳಿಯಿರುವ ನ್ಯಾಯಬೆಲೆ ಅಂಗಡಿಯವರೆಗೆ ಸಾಗಿ ಬಳಿಕ ತಿರುಗಿ ಅದೇ ರಸ್ತೆಯಾಗಿ ರಾಷ್ಟ್ರೀಯ ಹೆದ್ದಾರಿ ಪ್ರವೇಶಿಸಿ ಕಾಲೇಜು ಆವರಣಕ್ಕೆ ತಲುಪುವಂತೆ ಓಟದ ಮಾರ್ಗ ನಿಗದಿ ಮಾಡಲಾಗಿತ್ತು.
ಕ್ರೀಡಾಕೂಟವನ್ನು ಕರ್ನಾಟಕ ಸರಕಾರದ ಸ್ಪೀಕರ್ ಯು.ಟಿ ಖಾದರ್‌ರವರು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಪುತ್ತೂರು ಶಾಸಕ ಹಾಗೂ ಕ್ರೀಡಾಕೂಟ ಸಂಘಟನಾ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈಯವರು ವಹಿಸಿಕೊಂಡಿದ್ದರು.ಮಂಗಳೂರು ವಿಶ್ವವಿದ್ಯಾನಿಲಯದ ಉಪ ಕುಲಪತಿ ಪ್ರೊ|ಪಿ.ಎಲ್ ಧರ್ಮ,ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ಇನ್ನೂ ಅನೇಕ ಪ್ರಮುಖರು ಚಾಲನೆಯ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಆಕರ್ಷಕ ಮೆರವಣಿಗೆ…
ಮಧ್ಯಾಹ್ನ ಎರಡು ಗಂಟೆಗೆ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಿಂದ ಕ್ರೀಡಾ ಜ್ಯೋತಿಯ ಭವ್ಯ ಮೆರವಣಿಗೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಕ್ರೀಡಾಂಗಣಕ್ಕೆ ಆಗಮಿಸಿತು. ಮೆರವಣಿಗೆಯುದ್ದಕ್ಕೂ ಕಲಾ ತಂಡಗಳು, ಗೊಂಬೆ ಕುಣಿತ ಮತ್ತೀತರ ತಂಡಗಳು ಭಾಗವಹಿಸಿದವು.