Published
2 months agoon
By
Akkare Newsಬಂಟ್ವಾಳ : ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬಂಟ್ವಾಳ ತಾಲೂಕು ಶಾಖೆಯ 2024-29 ನೇ ಅವಧಿಯ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ಬಿಸಿ ರೋಡ್ .ಸಂಘದ ಸಭಾಭವನದಲ್ಲಿ ಬುಧವಾರ ನೆರವೇರಿತು.
ಅಧ್ಯಕ್ಷ ರಾಗಿ ಶ್ರೀ ಶಿವಪ್ರಸಾದ್ ಶೆಟ್ಟಿ,ಪ್ರಧಾನ ಕಾರ್ಯದರ್ಶಿ ಯಾಗಿ ಶ್ರೀ ಸಂತೋಷ್ ಕುಮಾರ್,ಖಜಾಂಚಿಯಾಗಿ ಬಸಯ್ಯ ಆಲಿಮಟ್ಟಿ,ರಾಜ್ಯ ಪರಿಷತ್ ಸದಸ್ಯರಾಗಿ ಶ್ರೀ ಜನಾರ್ಧನ್ ಜೆ ಇವರು ಆಯ್ಕೆಯಾಗಿರುತ್ತಾರೆ.
ಗೌರವಾಧ್ಯಕ್ಷರಾಗಿ ಶ್ರೀ ಶಮಂತ್ ಕುಮಾರ್,ಹಿರಿಯ ಉಪಾಧ್ಯಕ್ಷರಾಗಿ ಶ್ರೀ ನಂದನ್ ಶೆಣೈ,ಶ್ರೀ ಯಮನಪ್ಪ ಹಾಗೂ ಉಪಾಧ್ಯಕ್ಷ ರಾಗಿ ಶ್ರೀ ಲಕ್ಷ್ಣಣ್ ಹೆಚ್ ಕೆ,ಶ್ರೀ ರಮಾನಂದ,ಶ್ರೀ ಸೀತಾರಾಮ ಪೂಜಾರಿ ಇವರು ಆಯ್ಕೆಯಾಗಿರುತ್ತಾರೆ. ತಾಲೂಕಿನ ವಿವಿಧ ಇಲಾಖೆಯಿಂದ ಒಟ್ಟು 28 ಮಂದಿಯನ್ನು ನಿರ್ದೇಶಕರಾಗಿ ಆಯ್ಕೆ ಮಾಡಲಾಯಿತು.
ಚುನಾವಣಾಧಿಕಾರಿಯಾಗಿ ನಿವೃತ್ತ ಮುಖ್ಯೋಪಾಧ್ಯಾಯರು,ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕರು ಶ್ರೀ ರಮೇಶ್ ನಾಯಕ್ ರಾಯಿ ಇವರು ಸಹಕರಿಸಿದರು.
ನಂತರ ಸಂಘದ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಎಲ್ಲ ನೂತನ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು. ಸಭೆಯ ಅಧ್ಯಕ್ಷ ತೆಯನ್ನು ನಿಕಟಪೂರ್ವ ಅಧ್ಯಕ್ಷ ರಾದ ಶ್ರೀ ಉಮಾನಾಥ ರೈ ಮೇರಾವು ವಹಿಸಿದ್ದರು.ವೇದಿಕೆಯಲ್ಲಿ ಚುನಾವಣಾಧಿಕಾರಿಗಳಾದ ಶ್ರೀ ರಮೇಶ್ ನಾಯಕ್ ರಾಯಿ, ನೂತನ ಅಧ್ಯಕ್ಷ ರಾದ ಶ್ರೀ ಶಿವಪ್ರಸಾದ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್,ಖಜಾಂಚಿ ಬಸಯ್ಯ ಆಲಿಮಟ್ಟಿ,ರಾಜ್ಯ ಪರಿಷತ್ ಸದಸ್ಯರು ಶ್ರೀ ಜೆ ಜನಾರ್ಧನ್,ಗೌರವ ಸಲಹೆಗಾರರಾದ ಡಾ ಆಶೋಕ್ ಕುಮಾರ್ ರೈ,ಅಂಬಾಪ್ರಸಾದ್,ನವೀನ್ ಕುಮಾರ್ ಬೆಂಜನಪದವು, ಜೋಯೆಲ್ ಲೋಬೋ,ಗುರುರಾಜ ,ಇಂದುಶೇಖರ್,ರಾಜೇಂದ್ರ ರೈ,ಪದ್ಮರಾಜ್ ಶಿಂಧೆ,ಜನಾರ್ಧನ್ ಕೊಯಿಲ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಸ್ವಾಗತಿಸಿ, ಖಜಾಂಚಿ ಬಸಯ್ಯ ಆಲಿಮಟ್ಟಿ ವಂದಿಸಿದರು. ಜಯರಾಮ್ ಕಾರ್ಯಕ್ರಮ ನಿರೂಪಿಸಿದರು.