Published
6 days agoon
By
Akkare Newsಪುತ್ತೂರು: ಸಂಪ್ಯ – ಕಲ್ಲರ್ಪೆ ನಡುವಿನ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ದ್ವಾರದ ಬಳಿ ಸರಣಿ ಅಪಘಾತ ನಡೆದ ಘಟನೆ ಸೋಮವಾರ ಮಧ್ಯಾಹ್ನ ನಡೆಯಿತು.
ಸಿಟಿ ಹೋಂಡಾ, ಎರ್ಟಿಗಾ ಹಾಗೂ ಫಾರ್ಚೂನರ್ ನಡುವೆ ಅಪಘಾತ ಸಂಭವಿಸಿದೆ.
ಘಟನೆಯಲ್ಲಿ ಮಗುವಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದು ತಿಳಿದುಬಂದಿದೆ.
ಫಾರ್ಚೂನರ್ ಕಾರು ಓವರ್ ಟೇಕ್ ಮಾಡುವ ಭರದಲ್ಲಿ ಎರ್ಟಿಗಾ ಕಾರಿಗೆ ಹಿಂಬದಿಯಿಂದ ಡಿಕ್ಕಿಹೊಡೆದಿದೆ. ಎರ್ಟಿಗಾ ಕಾರಿನ ಚಾಲಕ ನಿಯಂತ್ರಣ ಕಳೆದುಕೊಂಡು ಎದುರಿನಿಂದ ಬರುತ್ತಿದ್ದ ಸಿಟಿ ಹೋಂಡಾ ಕಾರಿಗೆ ಅಪ್ಪಳಿಸಿದೆ. ಪರಿಣಾಮ ಮೂರು ಕಾರುಗಳಿಗೆ ಹಾನಿಯಾಗಿದ್ದು, ಕಾರಿನ ಏರ್ ಬಲೂನ್ ಗಳು ತೆರೆದುಕೊಂಡಿವೆ.
ರಸ್ತೆಯುದ್ಧಕ್ಕೂ ಕಾರುಗಳ ಆಯಿಲ್ ಚೆಲ್ಲಿದೆ.
ಹೆದ್ದಾರಿಯ ಎರಡೂ ಬದಿಯೂ ವಾಹನಗಳು ಸಾಲುಗಟ್ಟಿ ನಿಂತಿದ್ದವು.