Published
5 days agoon
By
Akkare Newsಮಂಗಳೂರು : ಪಾಂಡೇಶ್ವರ ಸಾಸ್ತಾನದ ಜೋಸೆಫ್ ಮೀನೇಜಸ್ ಮತ್ತು ಅವರ ಕುಟುಂಬದ ಹೃದಯ ಶ್ರೀಮಂತಿಕೆ ಎಷ್ಟು ವಿಶಾಲವಾಗಿದೆ ಎಂದರೆ ಪ್ರತಿದಿನ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ 700 ರೋಗಿಗಳ ಆರೈಕೆಮಾಡುವವರಿಗಾಗಿ ಪ್ರತಿ ದಿನ ಮಧ್ಯಾಹ್ನದ ಊಟವನ್ನು ತನ್ನ ಉಸಿರಿರುವವರೆಗೆ ತನ್ನ ಮಕ್ಕಳ ಮತ್ತು ಮೊಮ್ಮಕ್ಕಳ ಕಾಲದ ವರೆಗೂ ನೀಡಲು ವಾಗ್ದಾನ ಮಾಡಿದ್ದಾರೇ…
ಇದಕ್ಕೆ ತಗಲುವ ವೆಚ್ಚ ಪ್ರತಿ ತಿಂಗಳಿಗೆ ಬರೋಬ್ಬರಿ ಮೂರು ಲಕ್ಷ ರೂಪಾಯಿ…ಅಲ್ಲದೇ ಈ ಊಟವನ್ನು ಸರಬರಾಜು ಮಾಡಲು ಸ್ವತ: ವಾಹನ ಕೂಡ ಖರೀದಿಸಿದ್ದಾರೆ..ಇದರ ಸಂಪೂರ್ಣ ಜವಾಬ್ದಾರಿ ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ರವರಿಗೆ ನೀಡಿದ್ದಾರೆ…ಇಂತಹ ಶ್ರೇಷ್ಠ ದಾನಿಗಳ ಊರಿನಲ್ಲಿ ಬದುಕುವುದೇ ನಮಗೆ ಹೆಮ್ಮೆ…ಇಂತಹ ದಾನಿಗಳ ಸಂಖ್ಯೆ ಸಾವಿರವಾಗಲಿ….ಅಕ್ಕರೆಯ ಆರೈಕೆ…