Published
4 days agoon
By
Akkare Newsಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ದೋಣಿ ಮು*ಳುಗಿದ್ದು, 13 ಜನರು ಸಾ*ವನ್ನಪ್ಪಿರುವ ಘಟನೆ ಬುಧವಾರ (ಡಿ.18) ಮುಂಬಯಿ ಗೇಟ್ ಬಳಿ ಸಮುದ್ರದಲ್ಲಿ ನಡೆದಿದೆ.
ಮುಂಬಯಿಯ ಐಕಾನಿಕ್ ಗೇಟ್ವೇ ಆಫ್ ಇಂಡಿಯಾ ದಿಂದ ಎಲಿಫೆಂಟಾ ದ್ವೀಪಕ್ಕೆ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ನೀಲ್ ಕಮಲ್ ಹೆಸರಿನ ಬೋಟ್ಗೆ ಸ್ಪೀಡ್ ಬೋಟ್ ಡಿ*ಕ್ಕಿ ಹೊಡೆದು ಈ ಅ*ವಘಡ ಸಂಭವಿಸಿದೆ . ಬೋ*ಟ್ ಅ*ಪಘಾತದಲ್ಲಿ ಮೃ*ತರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.
ನೀಲ್ ಕಮಲ್ ಬೋಟ್ ಒಟ್ಟು 110 ಜನರನ್ನು ಹೊತ್ತೊಯ್ಯುತ್ತಿತ್ತು. ಅದರಲ್ಲಿ 13 ಮಂದಿ ಮೃ*ತಪಟ್ಟಿದ್ದು, ಮೂವರ ಸ್ಥಿತಿ ಚಿಂ*ತಾಜನಕವಾಗಿದೆ. ಉಳಿದ 94 ಮಂದಿಯನ್ನು ರಕ್ಷಿಸಲಾಗಿದೆ. ಇನ್ನು ಈ ಹಿಂದೆ ಬೋಟ್ ಇದ್ದಕ್ಕಿದ್ದಂತೆ ಮುಳುಗಲು ಕಾರಣವೇನು ಎನ್ನುವುದು ಗೊತ್ತಾಗಿರಲಿಲ್ಲ. ಇದೀಗ ಸ್ಪೀಡ್ ಬೋಟ್ ಡಿಕ್ಕಿ ಹೊಡೆಯುವ ದೃಶ್ಯ ಹೊರ ಬಂದಿದೆ. ಸದ್ಯ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಪೊಲೀಸ್ ಸಿಬ್ಬಂದಿ ಮತ್ತು ಸ್ಥಳೀಯ ಮೀನುಗಾರಿಕಾ ದೋಣಿಗಳ ಸಹಾಯದಿಂದ ಪ್ರಯಾಣಿಕರನ್ನು ರಕ್ಷಿಸುವ ಕಾರ್ಯಾಚರಣೆ ನಡೆಯುತ್ತಿದೆ.
‘ಮುಂಬಯಿ ಬಳಿ ಬುಚರ್ ಐಲ್ಯಾಂಡ್ನಲ್ಲಿ ಮಧ್ಯಾಹ್ನ 3.55ರ ವೇಳೆಗೆ ನೌಕಾಪಡೆಯ ಬೋಟ್ ‘ನೀಲ್ಕಮಲ್’ ಹೆಸರಿನ ದೋಣಿಗೆ ಡಿ*ಕ್ಕಿ ಹೊಡೆದು ಅ*ವಘಡ ಸಂಭವಿಸಿದೆ. ಸಂಜೆ 7.30ರ ಮಾಹಿತಿ ಪ್ರಕಾರ 101 ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. 10 ಮಂದಿ ಪ್ರಯಾಣಿಕರು ಹಾಗೂ 3 ಮಂದಿ ನೌಕಾಪಡೆಯ ಸಿಬ್ಬಂದಿ ಸೇರಿ ಒಟ್ಟು ದು*ರಂತದಲ್ಲಿ 13 ಜನರು ಸಾ*ವನ್ನಪ್ಪಿದ್ದಾರೆ. ಶೋ*ಧಕಾರ್ಯ ಮುಂದುವರಿದಿದೆ. ನಾ*ಪತ್ತೆಯಾದವರ ಹೆಚ್ಚಿನ ವಿವರ ಶೀಘ್ರವೇ ಲಭ್ಯವಾಗಲಿದೆ’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮಾಹಿತಿ ನೀಡಿದ್ದಾರೆ. ಮೃತರ ಕುಟುಂಬಗಳಿಗೆ ಸಿಎಂ ಪರಿಹಾರ ನಿಧಿಯಿಂದ 5 ಲಕ್ಷ ರೂ. ಘೋಷಣೆಯಾಗಿದೆ.