ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಪ್ರತಿಪಕ್ಷವನ್ನು ಟೀಕಿಸಲು ಹೋಗಿ ಮತ್ತೊಮ್ಮೆ ಇಕ್ಕಟ್ಟಿಗೆ ಸಿಲುಕಿದ ಬಿಜೆಪಿ

Published

on

ಗೃಹ ಸಚಿವ ಅಮಿತ್ ಶಾ ಅವರು ಅಂಬೇಡ್ಕರ್ ಬಗ್ಗೆ ನೀಡಿರುವ ಹೇಳಿಕೆಯನ್ನು ಖಂಡಿಸಿ ಪ್ರತಿಭಟಿಸುತ್ತಿರುವ ಪ್ರತಿಪಕ್ಷವನ್ನು ಟೀಕಿಸಲು ಹೋಗಿ ಬಿಜೆಪಿ ಮತ್ತೊಮ್ಮೆ ಇಕ್ಕಟ್ಟಿಗೆ ಸಿಲುಕಿದೆ. ಕಾಂಗ್ರೆಸ್ ಎತ್ತಿ ಹಿಡಿದಿರುವ ಅಂಬೇಡ್ಕರ್ ಪ್ಲೇಕಾರ್ಡನ್ನು ಎಡಿಟ್ ಮಾಡಿ ಅಲ್ಲಿಗೆ ಜಾರ್ಜ್ ಸೋರೂಸ್ ಫೋಟೋವನ್ನು ಅಂಟಿಸಿ ಬಿಜೆಪಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವುದು ಇದೀಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಹಲೋ ಕಾಂಗ್ರೆಸ್ ಮತ್ತು ಇಂಡಿಯಾ ಕೂಟ: ನಿಮಗೆ ನಾವು ಯೋಗ್ಯ ಚಿತ್ರವನ್ನು ಕೊಡುತ್ತಿದ್ದೇವೆ..

 

ಎಂಬ ಆಡಿ ಟಿಪ್ಪಣಿಯನ್ನು ಬರೆದು ಈ ಚಿತ್ರವನ್ನು ಬಿಜೆಪಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವುದು ಇದೀಗ ಮತ್ತೊಮ್ಮೆ ಅಂಬೇಡ್ಕರ್ ವಿರೋಧಿ ಮನಸ್ಥಿತಿಯ ಪ್ರದರ್ಶನವಾಗಿ ಆಕ್ರೋಶಕ್ಕೆ ತುತ್ತಾಗಿದೆ.

 

ಅಮಿತ್ ಷಾ ಪಾರ್ಲಿಮೆಂಟಿನಲ್ಲಿ ಅಂಬೇಡ್ಕರನ್ನು ಅವಮಾನಿಸಿದರು. ಇದೀಗ ಎಕ್ಸ್ ನಲ್ಲಿ ಅವರು ಬಾಬಾಸಾಹೇಬ್ ಅಂಬೇಡ್ಕರ್ ಅವರ ಚಿತ್ರವನ್ನು ಎಡಿಟ್ ಮಾಡಿ ಮತ್ತೊಮ್ಮೆ ಅವಮಾನಿಸಿದ್ದಾರೆ. ಬಾಬಾ ಸಾಹೇಬರ ಪ್ರತಿಮೆಯನ್ನು ದ್ವ0ಸ ಮಾಡುವ ಅದೇ ಮನಸ್ಥಿತಿ ಇಲ್ಲೂ ಗೋಚರವಾಗಿದೆ. ಯಾರಾದರೂ ಇವರನ್ನು ನಂಬುತ್ತಾರೆಯೇ ಎಂದು ಪ್ರಿಯಾಂಕ ಗಾಂಧಿ ಪ್ರಶ್ನಿಸಿದ್ದಾರೆ.

 

ಅಂಬೇಡ್ಕರ್ ರನ್ನು ಬಿಜೆಪಿ ಅವಮಾನಿಸುತ್ತಿದೆ ಮತ್ತು ಅವಹೇಳನಕ್ಕೆ ಈಡು ಮಾಡುತ್ತಿದೆ. ಅಂಬೇಡ್ಕರ್ ಗೆ ಅವಮಾನ ಮಾಡಿ ಅವರ ಕೋಟ್ಯಾಂತರ ಅಭಿಮಾನಿಗಳಿಗೆ ನೋವುಂಟು ಮಾಡಿದ ಅಮಿತ್ ಶಾ ರನ್ನು ಹುದ್ದೆಯಿಂದ ವಜಾ ಮಾಡುವ ಬದಲು ಅವರು ಅಂಬೇಡ್ಕರ್ ವಿರುದ್ಧದ ಅವಮಾನವನ್ನು ದ್ವಿಗುಣಗೊಳಿಸಿದ್ದಾರೆ. ಅಂಬೇಡ್ಕರ್ ರನ್ನು ಅವಮಾನಿಸಿರುವುದನ್ನು ಪ್ರಶ್ನಿಸುವುದು ಬಿಜೆಪಿಗೆ ತಮಾಷೆಯಾಗಿದೆಯೇ ಎಂದು ಕಾಂಗ್ರೆಸ್ ಮುಖಂಡ ಕೆ ಸಿ ವೇಣುಗೋಪಾಲ್ ಪ್ರಶ್ನಿಸಿದ್ದಾರೆ.

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement