Published
6 days agoon
By
Akkare Newsಪುತ್ತೂರು: ಪುತ್ತೂರು ಕೈಗಾರಿಕಾ ಸಂಘ ರಿ ಇದರ ಸಹಸಂಸ್ಥೆ ಸ್ಟೀಲ್ ಫ್ಯಾಬ್ರಿಕೇಶನ್ ಅಸೋಸಿಯೇಷನ್ ಇದರ ವಾರ್ಷಿಕ ಸಭೆಯು ಡಿ. 27ರಂದು ದರ್ಬೆ ಸಚಿನ್ ಟ್ರೇಡಿಂಗ್ ಮುಂಭಾಗದ ಸಣ್ಣ ಕೈಗಾರಿಕಾ ಸಹಕಾರ ಸಂಘ ಇದರ ಸಭಾಂಗಣದಲ್ಲಿ ನಡೆಯಿತು.
ಸಂಘದ ಹಿರಿಯ ಸದಸ್ಯ ಶೀನ ನಾಯ್ಕರವರು ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ , ಹಾರೈಸಿದರು. ಅಧ್ಯಕ್ಷತೆಯನ್ನು ಉದ್ಯಮಿ ಶಿವಪ್ರಸಾದ್ ಶೆಟ್ಟಿ ವಹಿಸಿದ್ದರು. ಗತ ಸಾಲಿನ ವರದಿಯನ್ನು ಸಂಘದ ಕಾರ್ಯದರ್ಶಿ, ಪಡೀಲ್ ವಿಘ್ನೇಶ್ವರ ಇಂಜಿನಿಯರಿಂಗ್ ವರ್ಕ್ಸ್ ಮಾಲಕ ಸುಧೀರ್ ಶೆಟ್ಟಿ ನೀಡಿದರು.
ಆ ಬಳಿಕ ನೂತನ ಸಾಲಿನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಅಧ್ಯಕ್ಷರಾಗಿ ಸುಧೀರ್ ಶೆಟ್ಟಿ ತೆಂಕಿಲ,ಪ್ರಧಾನ ಕಾರ್ಯದರ್ಶಿ ದಯಾನಂದ ಗೌಡ ಕೆಮ್ಮಾಯಿ, ಉಪಾಧ್ಯಕ್ಷರಾಗಿ ಚಂದ್ರಶೇಖರ ಮತ್ತು ಮೋಹನ್ ಗೌಡ , ಕಾರ್ಯದರ್ಶಿ ಲಿಯೋ ಮಾರ್ಟಿಸ್ ಹಾಗೂ ಖಜಾಂಚಿ ಜೈಸನ್ ಇವರುಗಳನ್ನು ಆಯ್ಕೆ ಮಾಡಲಾಯಿತು. ಸಂಘದ ಗೌರವ ಅಧ್ಯಕ್ಷರಾಗಿ ಶಿವಪ್ರಸಾದ್ ಶೆಟ್ಟಿಯವರನ್ನು ಆಯ್ಕೆ ಮಾಡಲಾಯಿತು. ಈ ವೇಳೆ ಮಂಗಳೂರಿನ ಶ್ರೀ ಲಕ್ಷ್ಮೀ ಸ್ಟೀಲ್ ಸಂಸ್ಥೆ ಮಾಲಕ ಕಾಂತ ಕುಮಾರ್ ಮತ್ತು ಯುರೋ ಗಾರ್ಡ್ ಸಂಸ್ಥೆಯ ಯಾದವ್ ಇವರು ವೇದಿಕೆಯಲ್ಲಿ ಹಾಜರಿದ್ದರು.
ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಕೈಗಾರಿಕಾ ಸಹಕಾರಿ ಸಂಘದ ಅಧ್ಯಕ್ಷ ಟಿ.ವಿ.ರವೀಂದ್ರರವರು ನಡೆಸಿಕೊಡುವಲ್ಲಿ ಸಹಕರಿಸಿದರು. ಕಾರ್ಯಕ್ರಮದ ಪ್ರಾಯೋಜಕತ್ವ ಶ್ರೀ ಲಕ್ಷ್ಮೀ ಸ್ಟೀಲ್ ಮಂಗಳೂರು ಹಾಗೂ ಯುರೋ ಗಾರ್ಡ್ ಗಟರ್ ಕಂಪನಿಯು ವಹಿಸಿಕೊಂಡು, ಲಕ್ಕಿ ಡ್ರಾ ಮೂಲಕ ಸಂಘದ ಸದಸ್ಯರಿಗೆ ಯಂತ್ರೋಪಕರಣಗಳ ವಿತರಣೆ ಮಾಡಿ, ತಮ್ಮಲ್ಲಿ ಲಭ್ಯವಿರುವ ಹಲವು ರೀತಿಯ ಸಾಮಾಗ್ರಿಗಳ ಬಗ್ಗೆ ವಿವರಣೆ ನೀಡಿದರು. ಲಿಯೋ ಮಾರ್ಟಿಸ್ ವಂದಿಸಿದರು. ಸಂಘಟನೆಯ ಸದಸ್ಯರು ವಿವಿಧ ಸಹಕಾರ ನೀಡಿದರು.