ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ಆತ್ಮಹತ್ಯೆ ಪ್ರಕರಣ :ಪತಿ ,ಅತ್ತೆ, ಮಾವ ಸೇರಿ ಐವರ ಬಂಧನ

Published

on

ಸುಳ್ಯ : ಖ್ಯಾತ ಉದ್ಯಮಿ ಕಾಪಿಲ ಗಿರಿಯಪ್ಪ ಗೌಡರ ಸೊಸೆ ಐಶ್ವರ್ಯಾ ಆತ್ಮಹತ್ಯೆ ಪ್ರಕರಣಕ್ಕೆ ತಿರುವೊಂದು ದೊರಕಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪತಿ ರಾಜೇಶ್‌, ಅತ್ತೆ ಸೀತಾ, ಮಾವ ಗಿರಿಯಪ್ಪ ಗೌಡ ಕಾಪಿಲ, ಮೈದುನ, ಮೈದುನನ ಪತ್ನಿಯನ್ನು ಪೊಲೀಸರು ಬಂಧಿಸಿರುವ ಕುರಿತು ವರದಿಯಾಗಿದೆ

 

ಐಶ್ವರ್ಯ ರಾಜೇಶ್‌ ಐದು ವರ್ಷದ ಹಿಂದೆ ಮದುವೆಯಾಗಿದ್ದು. ಯುಎಸ್‌ಎ ನಲ್ಲಿ ಎಂಬಿಎ ಮಾಡಿದ್ದ ಐಶ್ವರ್ಯ, ಡೈರಿ ರಿಚ್‌ ಐಸ್‌ಕ್ರೀಮ್‌ ಕಂಪನಿಯ ಮಾಲೀಕ ರಾಜೇಶ್‌. ಈ ಕಂಪನಿಯಲ್ಲಿ ಐಶ್ವರ್ಯ ತಂದೆ ಸುಬ್ರಹ್ಮಣ್ಯ ಅವರ ತಂಗಿ ಗಂಡ ರವೀಂದ್ರ ಅವರು ಅಡಿಟರ್‌ ಆಗಿ ಕೆಲಸ ಮಾಡಿಕೊಂಡಿದ್ದರು. ಅವರೇ ಮುಂದೆ ನಿಂತು ಐಶ್ವರ್ಯ ಮತ್ತು ರಾಜೇಶ್‌ ಮದುವೆ ಮಾಡಿಸಿದ್ದರು. ಅನಂತರ ಇವರ ಮಧ್ಯೆ ರವೀಂದ್ರ ಮತ್ತು ಸುಬ್ರಹ್ಮಣ್ಯ ಕುಟುಂಬದಲ್ಲಿ ಆಸ್ತಿ ಕಲಹ ಎದ್ದಿತು.

 

ಐಶ್ವರ್ಯ ಚಾರಿತ್ರ್ಯ ವಧೆಯನ್ನು ರವೀಂದ್ರ ಮಾಡತೊಡಗಿದರು. ರಾಜೇಶ್‌ ಕುಟುಂಬಕ್ಕೆ ಇಲ್ಲಸಲ್ಲದನ್ನು ಹೇಳಿಕೊಡೋಕೆ ಶುರು ಮಾಡಿಕೊಂಡಿದ್ದರು. ಇದರಿಂದ ರಾಜೇಶ್‌ ಕುಟುಂಬದ ಸದಸ್ಯರು ಐಶ್ವರ್ಯಗೆ ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದರೆಂದು ವರದಿಯಾಗಿದೆ.

 

ವರದಕ್ಷಿಣೆ ತರುವಂತೆಯೂ ಕಿರುಕುಳ ನೀಡಿದ್ದಾರೆಂದು ಹೇಳಲಾಗಿದೆ. ಎಷ್ಟೇ ಕಿರುಕುಳ ನೀಡಿದ್ದರೂ ಐಶ್ವರ್ಯ ಗಂಡನಿಗಾಗಿ ಸಹಿಸಿಕೊಂಡಿದ್ದರಂತೆ. ನಂತರ ಈ ಎಲ್ಲಾ ಘಟನೆಯಿಂದ ನೊಂದ ಐಶ್ವರ್ಯ 20 ದಿನಗಳ ಹಿಂದೆ ತವರು ಮನೆ ಸೇರಿದ್ದರು.

 

ಅ.26 ರಂದು ಮನನೊಂದು ಡೆತ್‌ನೋಟ್‌ ಬರೆದು ಸಾವಿಗೀಡಾಗಿದ್ದಾರೆ. ಈ ಘಟನೆ ಕುರಿತು ಐಶ್ವರ್ಯಾಳ ತಾಯಿ, ರಾಜೇಶ್‌ ಮತ್ತು ಅವರ ಕುಟುಂಬಸ್ಥರ ವಿರುದ್ಧ ಗೋವಿಂದರಾಜನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ರವೀಂದ್ರ, ಗೀತಾ, ಶಾಲಿನ, ಓಂ ಪ್ರಕಾಶ್‌ ಎಂಬುವವರ ಮೇಲೂ ದೂರು ದಾಖಲಾಗಿದ್ದು, ಐವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ

Continue Reading
Click to comment

Leave a Reply

Your email address will not be published. Required fields are marked *

Advertisement