Published
6 days agoon
By
Akkare Newsಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನಕ್ಕೆ ಸಂತಾಪ ಸೂಚಿಸದ ಬಾಲಿವುಡ್ ತಾರೆಯರ ವಿರುದ್ಧ ಕಾಂಗ್ರೆಸ್ ವಕ್ತಾರೆ ಸುಪ್ರಿಯ ಶ್ರೀನಾತೆ ಕೆಂಡಕಾರಿದ್ದಾರೆ. ಮನಮೋಹನ್ ಸಿಂಗ್ ಅವರ ನಿಧನಕ್ಕೆ ಸಂತಾಪ ಸೂಚಿಸಿ ಅಸ್ಸಾಂನ ಗುಹಾಟಿಯಲ್ಲಿ ಪಂಜಾಬಿ ಗಾಯಕ ದಿಲ್ ಜಿತ್ ದೋಸಾ0ಜೆ ನಡೆಸಿದ ಕಾರ್ಯಕ್ರಮವನ್ನು ಮೆಚ್ಚಿ ಪೋಸ್ಟ್ ಹಂಚಿಕೊಂಡಿರುವ ಶ್ರೀನಾತೆ, ಮನಮೋಹನ್ ಸಿಂಗ್ ಅವರಿಗೆ ಕನಿಷ್ಠ ಸಂತಾಪ ಸೂಚಿಸುವ ಯೋಗ್ಯತೆಯೂ ಬಹುತೇಕ ಸಿನಿಮಾ ತಾರೆಯರಿಗೆ ಇಲ್ಲ ಎಂದು ಕಿಡಿಕಾರಿದ್ದಾರೆ.
ಜನರ ಗುಂಪಿನಿಂದ ಒಂಟಿಯಾಗಿ ನಿಲ್ಲುವುದಕ್ಕೆ ಧೈರ್ಯ ಬೇಕು. ದಿಲ್ಜಿತ್ ಅವರು ತನ್ನ ಸಂಗೀತ ಕಚೇರಿಯನ್ನು ಮನಮೋಹನ್ ಸಿಂಗ್ ಅವರಿಗೆ ಅರ್ಪಿಸಿದ್ದಾರೆ. ಸಿನಿಮಾ ರಂಗದ ಬಹುತೇಕ ಮಂದಿಗಿಂತ ಭಿನ್ನವಾದ ನಿಲುವು ಇದು. ಭಾರತದ ಮಾಜಿ ಪ್ರಧಾನಿಯ ನಿಧನಕ್ಕೆ ಸಂತಾಪ ವ್ಯಕ್ತಪಡಿಸಲು ಕೂಡ ಸಾಧ್ಯವಿಲ್ಲದ ಪುಕ್ಕಲರ ಗುಂಪಿಗಿಂತ ದಿಲ್ಜಿತ್ ಶ್ರೇಷ್ಠ ಎಂದು ಶ್ರೀನಾತೆ ಖಾರವಾಗಿ ಬರೆದಿದ್ದಾರೆ.
ಮನಮೋಹನ್ ಅವರು ಬಹಳ ಸರಳ ಜೀವನ ನಡೆಸಿದರು ಒಮ್ಮೆ ಕೂಡ ಕೆಟ್ಟದಾಗಿ ಮಾತಾಡಿಯೇ ಇಲ್ಲ.