Published
4 days agoon
By
Akkare Newsಬಂಟ್ವಾಳ ತಾಲ್ಲೂಕಿನ ವಿಟ್ಲ ಪೋಲೀಸ್ ಠಾಣೆ ವ್ಯಾಪ್ತಿಯ ಬೋಳಂತೂರು ನಾರ್ಶ ಎಂಬಲ್ಲಿ ಸಿಂಗಾರಿ ಬೀಡಿ ಮೂಲಕ ಸುಲೈಮಾನ್ ಹಾಜಿ ಅನೇಕ ವರ್ಷಗಳಿಂದ ಬೀಡಿ ಉದ್ಯಮದಲ್ಲಿ ಹೆಸರುವಾಸಿಯಾಗಿದ್ದರು.ನಿನ್ನೆ ರಾತ್ರಿಅವರ ಮನೆಗೆ ತಮಿಳುನಾಡು ಮೂಲದ ಕಾರ್ ನಲ್ಲಿ ಆಗಮಿಸಿ ದಾಳಿ ನಡೆಸಿ ಇಡಿ ಅಧಿಕಾರಿಗಳೆಂದು ನಂಬಿಸಿ ಮನೆಯಲ್ಲಿದ್ದ ಸುಮರು 30 ಲಕ್ಷ ರೂಪಾಯಿಗಳನ್ನು ದೋಚಿ ಪರಾರಿಯಾಗಿದ್ದಾರೆ.
ವಿಟ್ಲ ಪೊಲೀಸರಿಗೆ ಮಾಹಿತಿ ಲಭ್ಯವಾಗಿದ್ದು ಸ್ಥಳಕ್ಕೆ ಧಾವಿಸಿ ತನಿಖೆ ನಡೆಸುತಿದ್ದಾರೆ. ಸುಮಾರು 2 ಕೋಟಿ ಮೌಲ್ಯದ ಮನೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸದೇ ಇರುವುದು ಕಳ್ಳ ಕದೀಮರಿಗೆ ಲೂಟಿ ಮಾಡಲು ಅವಕಾಶ ಕೊಟ್ಟಂತಾಗಿದೆ ಎಂದು ಸಾರ್ವಜನಿಕ ವಲಯದಿಂದ ತಿಳಿದು ಬಂದಿದೆ.
ಸಿಂಗಾರಿ ಬೀಡಿ ಮಾಲಕ ಸುಲೈಮಾನ್ ಹಾಜಿ ಎಂಬವರ ಮನೆಗೆ ನಿನ್ನೆ ಜ.3 ರಂದು TN ನೊಂದಣಿ ಎರ್ಟಿಕ ಕಾರ್ ನಲ್ಲಿ ಬಂದ ಸುಮರು 6 ಜನರ ತಂದ ರಾತ್ರಿ 8 ರಿಂದ 10 ಗಂಟೆಯ ವರೆಗೆ ತಾಪಸನಣೆ ನಡೆಸಿ ಸುಮರು 30 ಲಕ್ಷ ಹಣ ಮತ್ತು ಮನೆಯವರ ಮೊಬೈಲ್ ದೋಚಿ ದರೋಡೆ ಮಾಡಿದ್ದಾರೆ.