Published
18 hours agoon
By
Akkare Newsತರಕಾರಿ, ಬಸ್ ದರ ಸೇರಿ ವಿವಧ ವಸ್ತುಗಳ ಬೆಲೆ ಏರಿಕೆ ಮಾಡಿದ ರಾಜ್ಯ ಸರಕಾರ ಇದೀಗ ಮದ್ಯಪ್ರಿಯರಿಗೂ ಶಾಕ್ ನೀಡಿದೆ. ಅದೇನೆಂದರೆ ಶೀಘ್ರವೇ ಬಿಯರ್ ದರ ಏರಿಕೆಯಾಗಲಿದೆ ಎಂದು ಮೂಲಗಳು ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.
ಕರ್ನಾಟಕದಲ್ಲಿ ಶೀಘ್ರದಲ್ಲೇ ಬಿಯರ್ ಬೆಲೆ ಪ್ರತಿ ಬಾಟಲಿಗೆ ರೂ.10 ರಿಂದ 50 ರೂ.ಗಳಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಪ್ರತಿ ಬಿಯರ್ ಬಾಟಲಿಗೆ ಕನಿಷ್ಠ 10 ರಿಂದ 50 ರೂ.ಗಳವರೆಗೆ ಆಲ್ಕೋಹಾಲ್ ಅಂಶದ ಮೇಲೆ ದರ ಹೆಚ್ಚಾಗಲಿದೆ. ಕಡಿಮೆ ಆಲ್ಕೋಹಾಲ್ ಅಂಶವಿರುವ ಬಿಯರ್ಗಳ ದರ ಹೆಚ್ಚಾಗಲ್ಲ.
ಸ್ಟ್ರಾಂಗ್ ಬಿಯರ್ಗಳ ಬೆಲೆ ಏರಿಕೆಯಾಗಲಿದೆ. ಬುಲೆಟ್ ಬಿಯರ್ ಬೆಲೆ 98 ರೂ. ಇದ್ದು, ಇನ್ನು ಅದು ರೂ.145 ಕ್ಕೆ ಏರಿಕೆಯಾಗಲಿದೆ. ಜ.20 ರಂದು ಪರಿಷ್ಕೃತ ದರ ಜಾರಿಗೆ ಬರಲಿರುವ ಕುರಿತು ವರದಿಯಾಗಿದೆ.