Published
6 hours agoon
By
Akkare Newsಜಮೀಲ ಸನಿಕ ಮೇಮೋರಿಯಲ್ ಅಲ್ ಬಿರ್ರ್ ಶಾಲೆ ಪರ್ಲಡ್ಕ ಕ್ಕೆ ಜನವರಿ 09 ರಂದು ಸಮಸ್ತ ಅಧ್ಯಕ್ಷರಾದ ಸೈಯ್ಯಿದುಲ್ ಉಲಮಾ ಸೈಯ್ಯದ್ ಜಿಫ್ರಿ ಮುತ್ತುಕ್ಕೋಯ ತಂಙಳ್ ರವರು ಭೇಟಿ ನೀಡಿ ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಸ್ಥೆಯ ನಿರ್ದೇಶಕರಾದ ಉಸ್ತಾದ್ ಅನೀಸ್ ಕೌಸರಿಯವರು ಸೈಯ್ಯಿದರನ್ನು ಸ್ವಾಗತಿಸಿ ಸಂಸ್ಥೆಯ ಬಗ್ಗೆ ವಿವರಿಸಿದರು.
ಬಳಿಕ 2025/26 ನೇ ಸಾಲಿನ ದಾಖಲಾತಿಗೆ ಚಾಲನೆ ನೀಡಿ ಮೊದಲ ದಾಖಲಾತಿ ಪತ್ರವನ್ನು ಉಮ್ಮರ್ ಶಾಫಿ ಪಾಪೆತ್ತಡ್ಕ ರವರ ಪುತ್ರ ಅಹ್ಮದ್ ಝಯಾನ್ ಗೆ ನೀಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಸಂಚಾಲಕರಾದ ಹಸನ್ ಹಾಜಿ ಸಿಟಿ ಬಜಾರ್, ಅಧ್ಯಕ್ಷರಾದ ಇಬ್ರಾಹಿಂ ಬಾತಿಷ ಹಾಜಿ ಪಾಟ್ರಕೋಡಿ, ಉಪಾಧ್ಯಕ್ಷರಾದ ಅಬ್ದುಲ್ ರಹಿಮಾನ್ ಹಾಜಿ ಕೂರ್ನಡ್ಕ , ಕೋಶಾಧಿಕಾರಿ ಸೈಯ್ಯದ್ ಅಫ್ಹಾಂ ತಂಙಳ್ , ಸಂಘಟನಾ ಕಾರ್ಯದರ್ಶಿ ಖಾದರ್ ಕೂರ್ನಡ್ಕ, ಸಮಸ್ತ ವಿಧ್ಯಾಭ್ಯಾಸ ಬೋರ್ಡ್ ಸದಸ್ಯರಾದ ರಶೀದ್ ಹಾಜಿ ಪರ್ಲಡ್ಕ, SKSSF ಕೇಂದ್ರೀಯ ಸದಸ್ಯ ಇಸ್ಮಾಯಿಲ್ ಯಮಾನಿ , ಟ್ರಸ್ಟಿ ಮುನೀರ್ ಹಾಜಿ ಪಾಟ್ರಕೋಡಿ, ಮೊದಲಾದವರು ಉಪಸ್ಥಿತರಿದ್ದರು..
ಪ್ರಧಾನ ಕಾರ್ಯದರ್ಶಿ ಉಮ್ಮರ್ ಶಾಫಿ ಪಾಪೆತ್ತಡ್ಕ ಕಾರ್ಯಕ್ರಮ ನಿರೂಪಿಸಿ ವಂದಿಸಿದರು..
ವರದಿ ಅಬ್ದುಲ್ ಖಾದರ್ ಪಾಟ್ರಕೋಡಿ