Published
5 hours agoon
By
Akkare Newsಕರ್ನಾಟಕ ಸರಕಾರ, ರೂರಲ್ ಪ್ರೌಢ ಶಾಲೆ, ರೂರಲ್ ಪದವಿ ಪೂರ್ವ ಕಾಲೇಜು ಹಾಗೂ ರೂರಲ್ ಡಿಗ್ರಿ ಕಾಲೇಜು ಇವರ ಸಹಭಾಗಿತ್ವದಲ್ಲಿ ಜನವರಿ 9 ಮತ್ತು 10 ರಂದು ಕೋಲಾರ ಜಿಲ್ಲೆಯ ಬೇತಮಂಗಲದಲ್ಲಿ ನಡೆದ 14 ಮತ್ತು 17 ರ ವಯೋಮಾನದ ರಾಜ್ಯ ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಬಾಲಕಿಯರ ವಿಭಾಗದಲ್ಲಿ ಪಾಂಗ್ಳಾಯಿ ಬೆಥನಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ 9ನೇ ತರಗತಿಯ ವಿದ್ಯಾರ್ಥಿಗಳಾದ ವೈಗಾ ಎಂ , ಫಾತಿಮ ರಿಧಾ, ನಿಹಾನಿ ಮುತ್ಲಾಜೆ, ನಿಹಾರಿಕಾ, ಪೂರ್ವಿಕಾ, 10ನೇ ತರಗತಿಯ ವಿದ್ಯಾರ್ಥಿಗಳಾದ ರೋಶ್ನಿ ಆ್ಯನೇಟ್ ಫೆರ್ನಾಂಡಿಸ್, ಪ್ರಿಯಾಂಕ ಪಿ, ಹಾಗೂ ಹಿತಾಶ್ರೀ ಜಿ ಗೌಡ, ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯಿನಿ ಭಗಿನಿ ಶಾಂತಿ ಬಿ.ಎಸ್. ತಿಳಿಸಿದ್ದಾರೆ.
ಇವರಿಗೆ ಶಾಲಾ ದೈಹಿಕ ಶಿಕ್ಷಕರಾದ ಶ್ರೀ ಹರೀಶ್ ರವರು ತರಬೇತಿಯನ್ನು ನೀಡಿದ್ದಾರೆ. ತಂಡದ ವ್ಯವಸ್ಥಾಪಕಿಯಾಗಿ ಭಗಿನಿ ರೀಮಾ ಜ್ಯಾನೆಟ್ ಡಿ’ಸೋಜ ತಂಡವನ್ನು ಮುನ್ನಡೆಸಿದ್ದಾರೆ.