Published
24 hours agoon
By
Akkare Newsಪುತ್ತೂರು: ಜ.13.ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪುತ್ತೂರು ತಾಲೂಕು ,ಯುವಜನ ಒಕ್ಕೂಟ ಪುತ್ತೂರು ತಾಲೂಕು, ಇವುಗಳ ಸಹಯೋಗದೊಂದಿಗೆ ಸ್ವಾಮಿ ವಿವೇಕಾನಂದ ಜಯಂತಿ ಯ ಪ್ರಯುಕ್ತ ಕೊಡಮಾಡುವ ತಾಲೂಕು ಯುವ ಪ್ರಶಸ್ತಿ ಗೆ ನವೀನ್ ರೈ ಬನ್ನೂರು ಆಯ್ಕೆಯಾಗಿದ್ದಾರೆ.
ರಕ್ತದಾನ, ಸಂಘ ಸಂಸ್ಥೆ, ರೋಟರಾಕ್ಟ್ ಕ್ಲಬ್ ಮತ್ತು ಧಾರ್ಮಿಕ, ಸಾಮಾಜಿಕ, ರಾಜಕೀಯ ದಲ್ಲಿ ಸಕ್ರಿಯ ಭಾಗವಹಿಸುವಿಕೆ ಮೂಲಕ ಸಮಾಜಮುಖಿ ಕಾರ್ಯ ಗಳನ್ನು ಗುರುತಿಸಿ ಸಮಾಜ ಸೇವೆ ವಿಭಾಗ ದಲ್ಲಿ ಪ್ರಶಸ್ತಿ ಗೆ ಆಯ್ಕೆಮಾಡಿರುತ್ತಾರೆ.