Published
3 months agoon
By
Akkare Newsಪುತ್ತೂರು: ಶಾಸಕನಾದ ಬಳಿಕ ನಾನು ಎಲ್ಲರಿಗೂ ಶಾಸಕನೇ ಆಗಿದ್ದೇನೆ. ನನ್ನ ಬಳಿ ಸಹಾಯ ಕೇಳಿ ಬರುವ ಜನರ ಜಾತಿ ಕೇಳಲ್ಲ, ಧರ್ಮ ನೋಡಲ್ಲ, ಪಕ್ಷ ನೋಡಲ್ಲ ,ಇದಾವುದನ್ನೂ ಪರಿಗಣಿಸದೆ ರಾಜಧರ್ಮ ಪಾಲನೆ ಮಾಡುತ್ತಾ ಅಧಿಕಾರ ಚಲಾಯಿಸುತ್ತಿದ್ದೇನೆ . ಕಳೆದ ಚಿನಾವಣೆಯ ಸಂದರ್ಭದಲ್ಲಿ ನನ್ನ ಜೊತೆ ಇದ್ದು ಗೆಲುವಿಗಾಗಿ ಕೆಲಸ ಮಾಡಿದ ಅನೇಕ ಜನರಿದ್ದಾರೆ ಅವರ ಪೈಕಿ ಕೆಲವರು ಮಾತ್ರ ಆ ಕೆಲಸ ಈ ಕೆಲಸ ಎಂದು ಬರುತ್ತಿದ್ದಾರೆ,ಮತ್ತೆ ಕೆಲವರು ಅವರವರ ಗ್ರಾಮಕ್ಕೆ ಹೋದಾಗ ಮಾತ್ರ ಮಾತಾಡ್ಲಿಕ್ಕೆ ಸಿಗ್ತಾರೆ. ಯಾರೆಲ್ಲಾ ಗೆಲುವಿಗಾಗಿ ಕೆಲಸ ಮಾಡಿದ್ದಾರೆ ಎಂದು ನನಗೆ ಗೊತ್ತಿದೆ, ನಾನು ಮರೆತಿಲ್ಲ ಜೊತೆಗೆ ಚುನಾವಣೆಯ ಕಾಲದಲ್ಲಿ ಕೆಲವರ ಡಿಪಿಯನ್ನು ಸ್ಕ್ರೀನ್ ಶಾಟ್ ತೆಗೆದು ಇಟ್ಟುಕೊಂಡಿದ್ದೇನೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.
ಅವರು ಕೈಕಾರದಲ್ಲಿನಡೆದ ಮಹಿಳಾ ಬಂಟರ ವಲಯಸಂಘದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾನು ಚುನಾವಣೆಗೆ ನಿಂತಾಗ ಯಾರೆಲ್ಲಾ ನನ್ನ ಜೊತೆ ಇದ್ರು ಎಂಬುದು ನನಗೆ ಸ್ಪಷ್ಟವಾಗಿ ಗೊತ್ತಿದೆ, ಯಾರಿಗೆಲ್ಲ ಎರಡುಮುಖ ಇತ್ತು ಎಂಬುದು ಗೊತ್ತಿದೆ. ಡಿ ಪಿ ಹಾಕಿದ ಕೆಲವರು ನನ್ನ ಕಚೇರಿಗೆ ಬರುತ್ತಿದ್ದಾರೆ, ನನ್ನ ಜೊತೆ ಎಲ್ಲಾ ಕಾರ್ಯದಲ್ಲಿಸಹಾಯಿಗಳಾಗಿದ್ದಾರೆ ಇದು ಸಹೃದಯಿಗಳ ಗುಣ ನಡತೆಯಾಗಿದೆ . ನನಗೆ ವೋಟು ಹಾಕಿಲ್ಲ ಎಂದು ಯಾರಿಗೂ ಬೇಸರ ಬೇಡ. ಎಲ್ಲವೂ ದೇವರ ಇಚ್ಚೆಯಂತೆ ನಡೆಯುತ್ತದೆ ಎಂಬ ನಂಬಿಕೆ ನನ್ನಲ್ಲಿದೆ.ಕ್ಷೇತ್ರದ ಎಲ್ಲಾ ಜನರಿಗೂ ನಾನು ಶಾಸಕನಾಗಿರುವ ಕಾರಣ ಎಲ್ಲರನ್ನೂ ಗೌರವದಿಂದ ಕಾಣುವುದು ನನ್ನ ಜವಾಬ್ದಾರಿ ಆ ಕೆಲಸವನ್ನು ಮಾಡುತ್ತಿದ್ದೇನೆ ಎಂದು ಶಾಸಕರು ಹೇಳಿದರು.