ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ರಾಜ್ಯ ಬಿಜೆಪಿಯಲ್ಲಿ ತಲ್ಲಣ ಉಂಟುಮಾಡಿದ ಈಶ್ವರಪ್ಪ ಹೇಳಿಕೆ

Published

on

 

ಮಂಗಳೂರು(ಬೆಂಗಳೂರು): ಬಿಜೆಪಿ ಮತ್ತು ಜೆಡಿಎಸ್‌ ನಡುವಿನ ಮೈತ್ರಿಗೆ ಸಂಬಂಧಿಸಿದಂತೆ ಒಂದರ ಹಿಂದೆ ಒಂದರಂತೆ ಅಪಸ್ವರಗಳು ಕೇಳಿ ಬರತೊಡಗಿವೆ. ಇಂದು ಈಶ್ವರಪ್ಪ ಬಿಜೆಪಿ ಜೆಡಿಎಸ್‌ ಮೈತ್ರಿ ಬಗ್ಗೆ ಹೇಳಿಕೆಯೊಂದನ್ನು ನೀಡಿ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.

 

ನಿನ್ನೆ ಮಂಡ್ಯ ಸಂಸದೆ ಸುಮಲತಾ ತಾನು ಯಾವುದೇ ಕಾರಣಕ್ಕೂ ಮಂಡ್ಯ ಟಿಕೆಟ್‌ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲವೆನ್ನುವ ಮೂಲಕ ಜೆಡಿಎಸ್‌ ಪಕ್ಷಕ್ಕೆ ಟಕ್ಕರ್‌ ಕೊಟ್ಟಿದ್ದರು. ಈಗ ಈಶ್ವರಪ್ಪ ಬೆಂಗಳೂರು ದಕ್ಷಿಣ ಪದವೀಧರರ ಕ್ಷೇತ್ರದಲ್ಲಿ ಜೆಡಿಎಸ್‌ ಪಕ್ಷಕ್ಕೆ ಯಾವುದೇ ಕಾರಣಕ್ಕೂ ಬೆಂಬಲ ನೀಡುವುದಿಲ್ಲ ಎನ್ನುವ ಮೂಲಕ ಜೆಡಿಸ್‌ ಪಕ್ಷಕ್ಕೆ ಶಾಕ್‌ ಟ್ರೀಟ್ಮೆಂಟ್‌ ನೀಡಿದ್ದಾರೆ. ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಒಮ್ಮೆಯೂ ಗೆದ್ದಿಲ್ಲ, ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯ 12 ಆಕಾಂಕ್ಷಿಗಳಿದ್ದಾರೆ. ಹೀಗಾಗಿ ಜೆಡಿಎಸ್ ಗೆ ಬೆಂಬಲ ನೀಡುವ ಪ್ರಶ್ನೆಯೇ ಬರುವುದಿಲ್ಲ ಎಂದು ಅವರು ಖಡಾಖಂಡಿತವಾಗಿ ತಿಳಿಸಿದ್ದಾರೆ.

 

ರಾಜ್ಯ ನಾಯಕರನ್ನು ಕಡೆಗಣಿಸಿ ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಂಡ ಹೈಕಮಾಂಡ್‌ ಈಗ ರಾಜ್ಯ ನಾಯಕರ ಅಸಹಕಾರವನ್ನು ಎದುರಿಸುತ್ತಿದೆ. ರಾಜ್ಯದ ಬಹುತೇಕ ನಾಯಕರಿಗೆ ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಳ್ಳುವುದು ಇಷ್ಟವಿದ್ದಿರಲಿಲ್ಲ. ಹಾಸನದ ಪ್ರೀತಂ ಗೌಡ, ಎ ಮಂಜು, ಸುಮಲತಾ, ಸದಾನಂದ ಗೌಡ ಸೇರಿದಂತೆ ಹಲವು ನಾಯಕರು ಜೆಡಿಎಸ್‌ ಜೊತೆಗಿನ ಮೈತ್ರಿಯಿಂದ ಇಕ್ಕಟ್ಟಿಗೆ ಸಿಲುಕಿದ್ದಾರೆ. ಅತ್ತ ಜೆಡಿಎಸ್‌ ಪಕ್ಷದಲ್ಲೂ ಸಾಕಷ್ಟು ನಾಯಕರು ಇತರ ಪಕ್ಷಗಳಿಗೆ ವಲಸೆ ಹೋಗಲು ಸಿದ್ದರಾಗಿದ್ದು ಯಾವ ಪಕ್ಷಕ್ಕೆ ಹೋಗಬೇಕೆನ್ನುವ ಗೊಂದಲದಲ್ಲಿದ್ದಾರೆ. ಜೆಡಿಎಸ್‌ ಜೊತೆಗಿನ ಮೈತ್ರಿ ಲೋಕಸಭಾ ಚುನಾವಣೆಗೆ ಮಾತ್ರ ಮೀಸಲು ಎಂದಿರುವ ಈಶ್ವರಪ್ಪ ರಾಜ್ಯದಲ್ಲಿ ಇತರ ಚುನಾವಣೆಗಳ ವಿಷಯದಲ್ಲಿ ಜೆಡಿಎಸ್‌ ಪಕ್ಷವನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲವೆನ್ನುವ ಪರೋಕ್ಷ ಸಂದೇಶವನ್ನು ಕಳುಹಿಸಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement