Published
3 months agoon
By
Akkare Newsಈ ಮೂಲಕ ಕ್ಷೇತ್ರ ಸಮಿತಿಯ ಅಧ್ಯಕ್ಷರಾಗಿದ್ದ ಅಬೂಬಕ್ಕರ್ ಸಿದ್ದೀಕ್ ಕೆ ರವರು ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಆಗಿ ತೆರವಾದ ಸ್ಥಾನಕ್ಕೆ ನೂತನ ಅದ್ಯಕ್ಷರಾಗಿ ಅಶ್ರಫ್ ಬಾವು ರವರು ಆಯ್ಕೆಯಾದರು. ಕ್ಷೇತ್ರ ಸಮಿತಿ ಉಪಾಧ್ಯಕ್ಷರಾಗಿ ಅಬ್ದುಲ್ ಹಮೀದ್ ಸಾಲ್ಮರ, ಕೋಶಾಧಿಕಾರಿಯಾಗಿ ಮುಸ್ತಫಾ ಡಿ.ಬಿ ವಿಟ್ಲ ರವರನ್ನು ಆಯ್ಕೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಕ್ಷೇತ್ರ ಸಮಿತಿಗೆ ಅಡ್ವೊಕೇಟ್ ಅಬ್ದುಲ್ ರಹಿಮಾನ್ ಬಂಡಾಡಿ, . ಬಿ.ಕೆ ಸುಲೈಮಾನ್ ರವರನ್ನು ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಎಸ್.ಡಿ.ಪಿ.ಐ ಜಿಲ್ಲಾ ಕಾರ್ಯದರ್ಶಿಗಳಾದ ಅಶ್ರಫ್ ತಲಪಾಡಿ , ಶಾಕಿರ್ ಅಳಕೆಮಜಲು ನವಾಝ್ ಕಟ್ಟೆ ಉಪಸ್ಥಿತರಿದ್ದರು.. ಸಭೆಯು ಸ್ವಾಗತವನ್ನು ಕ್ಷೇತ್ರ ಸಮಿತಿ ಕಾರ್ಯದರ್ಶಿ ಉಸ್ಮಾನ್ ಏಕೆ ಹಾಗೂ ಜೊತೆ ಕಾರ್ಯದರ್ಶಿಯಾದ ರಹೀಂ ಪುತ್ತೂರು ರವರು ಧನ್ಯವಾದವನ್ನು ನೆರವೇರಿಸಿದರು.