Published
3 months agoon
By
Akkare Newsಪುತ್ತೂರು :ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸ್ವಚ್ಛ ಭಾರತ್ ಮಿಷನ್, ತಾಲ್ಲೂಕು ಪಂಚಾಯತ್ ಪುತ್ತೂರು, ಗ್ರಾಮ ಪಂಚಾಯತ್ ಕೋಡಿಂಬಾಡಿ ,ಗ್ರಾಮದ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಸ್ವಚ್ಛ ಪುತ್ತೂರು ಬೃಹತ್ ಸ್ವಚ್ಚತಾ ಶ್ರಮದಾನ ಕಾರ್ಯಕ್ರಮ ನಡೆಯಲಿದ್ದು,ಇದರ ಸ್ವಚ್ಚತಾ ಅಭಿಯಾನಕ್ಕೆ ಇಂದು ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಸ್ವಚ್ಚತಾ ಅಭಿಯಾನದ ನೊಡಲ್ ಅಧಿಕಾರಿಯಾದ ಚೇತನ್ ಯೋಜನಾ ಆಯೋಗದ ಕಾರ್ಯನಿರ್ವಾಹಕ ಇಂಜಿನಿಯರ್,ಮಾತನಾಡಿ ಗ್ರಾಮವು ಸ್ವಚ್ಚವಾಗಿರಿಸುವುದು ನಮ್ಮ ಆದ್ಯ ಕರ್ತವ್ಯ ಎಲ್ಲಾ ಗ್ರಾಮಸ್ಥರು ಸ್ವಚ್ಚತಾ ಅಭಿಯಾನಕ್ಕೆ ಕೈ ಜೋಡಿಸಿ ಸಹಕಾರ ನೀಡಬೇಕೆಂದು ಹೇಳಿದರು.
ಜ 29 ಬುಧವಾರ ಬೆಳಿಗ್ಗೆ ಗಂಟೆ 9ರಿಂದ ಶಾಂತಿನಗರ ದಿಂದ ಸೇಡಿಯಪು ನ ವರೆಗೆ ನಡೆಯಲಿದೆ, ಮತ್ತು. ಜ 24 ರಿಂದ ಎಲ್ಲಾ ವಾರ್ಡ್, ಅಂಗನವಾಡಿ, ಶಾಲೆ ಗಳಲ್ಲೂ ಅಭಿಯಾನ ನಡೆಯಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸ್ಥಾನವನ್ನು ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಮಲ್ಲಿಕಾ ವಹಿಸಿಕೊಂಡಿದ್ದರು ಪಂಚಾಯತ್ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರ್, ಸದಸ್ಯರಾದ ಜಗನಾಥ್ ಶೆಟ್ಟಿ, ರಾಮಣ್ಣ ಗೌಡ, ರಾಮಚಂದ್ರ ಪೂಜಾರಿ, ಉಷಾ ಲಕ್ಶ್ಮಣ ಪೂಜಾರಿ,ಪುಷ್ಪ ಲೋಕಯ್ಯ ನಾಯ್ಕ್,ಮೋಹಿನಿ ಗೌಡ ಪೂರ್ಣಿಮಾ ಶೆಟ್ಟಿ,ಅಭಿರುದ್ದಿ ಅಧಿಕಾರಿ ಶೈಲಜಾ ಭಟ್, ಕಾರ್ಯದರ್ಶಿ ಅಣ್ಣು, ಸಿಬ್ಬಂದಿ ಗಳಾದ ಸುರೇಶ್ ಕಿನ್ನಿತ್ತ ಪಳಿಕೆ,ಸುರೇಶ,ರೀತಾ, ಕಾವ್ಯ, ಲೀಲಾವತಿ , ಉಪಸ್ಥಿತರಿದ್ದರು