Connect with us

ಇತರ

ಸಾಲ ಮರುಪಾವತಿಸದ ಕಾರಣಕ್ಕೆ ಮಹಿಳೆ ಮೇಲೆ ಸಾಮೂಹಿಕ ಹಲ್ಲೆ; ತಲೆ ಬೋಳಿಸಿ ಅವಮಾನ

Published

on

ತ್ರಿಪುರಾದ ಸೆಪಾಹಿಜಲಾ ಜಿಲ್ಲೆಯ ಬಿಶಾಲ್‌ಗಢದ ಲಾಲ್‌ಸಿಂಗ್‌ಮುರಾ ಪ್ರದೇಶದಲ್ಲಿ ಮಹಿಳೆಯೊಬ್ಬರ ಮೇಲೆ ಇತರ ಮಹಿಳೆಯರ ಗುಂಪು ಹಲ್ಲೆ ನಡೆಸಿ, ಆಕೆಯ ಭಾಗಶಃ ತಲೆಯನ್ನು  ಬೋಳಿಸಿದೆ ಎಂದು ಆರೋಪಿಸಲಾಗಿದೆ.

 

ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ಬಿಶಾಲ್‌ಗಢ ಮಹಿಳಾ ಠಾಣೆಯ ಪೊಲೀಸರು ಸಂತ್ರಸ್ತೆಯನ್ನು ರಕ್ಷಿಸಿ ಸುರಕ್ಷತೆ ಮತ್ತು ಆರಂಭಿಕ ವಿಚಾರಣೆಗಾಗಿ ಠಾಣೆಗೆ ಕರೆದೊಯ್ದಿದ್ದಾರೆ.

ಈ ಘಟನೆಯ ತನಿಖೆ ನಡೆಸುತ್ತಿರುವ ಬಿಶಾಲ್‌ಗಢ ಮಹಿಳಾ ಪೊಲೀಸ್ ಠಾಣೆಯ ಉಸ್ತುವಾರಿ ಇನ್ಸ್‌ಪೆಕ್ಟರ್ ಶಿಯುಲಿ ದಾಸ್, ಸ್ಥಳೀಯ ಸ್ವ-ಸಹಾಯ ಗುಂಪಿನ (ಎಸ್‌ಎಚ್‌ಜಿ) ಸದಸ್ಯರು ಈ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.

ಮಹಿಳೆಯರ ಗುಂಪೊಂದು ತನ್ನ ಮೇಲೆ ಹಲ್ಲೆ ನಡೆಸಿ, ತಲೆಯ ಅರ್ಧ ಭಾಗವನ್ನು ಬೋಳಿಸಿದೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಇದು ಬಹುಶಃ ಎಸ್‌ಎಚ್‌ಜಿಯಿಂದ ಎರವಲು ಪಡೆದ ಹಣಕ್ಕೆ ಸಂಬಂಧಿಸಿದ ಹಣಕಾಸಿನ ವಿವಾದವಾಗಿರಬಹುದು. ಸತ್ಯವನ್ನು ಬಹಿರಂಗಪಡಿಸಲು ನಾವು ಸಂಪೂರ್ಣ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

 

 

 

ಸಂತ್ರಸ್ತೆ ಈ ಭಯಾನಕ ಘಟನೆಯನ್ನು ವಿವರಿಸುತ್ತಾ, ತಾನು ಅಡುಗೆಮನೆಯಲ್ಲಿದ್ದಾಗ ಸುಮಾರು 15-20 ಸ್ಥಳೀಯ ಮಹಿಳೆಯರು ತನ್ನ ಮನೆಗೆ ನುಗ್ಗಿದರು. ಸಂಕ್ಷಿಪ್ತ ಸಂಭಾಷಣೆಯ ಬಳಿಕ ಗುಂಪು ನನ್ನನ್ನು ಹೊರಗೆ ಎಳೆದುಕೊಂಡು ಹೋಗಿ, ಹಲ್ಲೆ ನಡೆಸಿ, ನನ್ನ ಅರ್ಧ ತಲೆ ಬೋಳಿಸಿದೆ ಎಂದು ಆರೋಪಿಸಿದ್ದಾರೆ.

ಸ್ವಸಹಾಯ ಸಂಘದಿಂದ ಪಡೆದ ಹಣವನ್ನು ತಕ್ಷಣ ಹಿಂದಿರುಗಿಸುವಂತೆ ದಾಳಿಕೋರರು ಒತ್ತಾಯಿಸಿದ್ದು, ಹಿಂಸಾತ್ಮಕ ಕೃತ್ಯಕ್ಕೆ ಕಾರಣವಾಯಿತು ಎಂದು ಅವರು ಹೇಳಿದರು.

 

 

ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ನ ವಿವಿಧ ವಿಭಾಗಗಳ ಅಡಿಯಲ್ಲಿ 20-21 ಅನಾಮಧೇಯ ವ್ಯಕ್ತಿಗಳ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ಇದರಲ್ಲಿ ಮಹಿಳೆಯ ಘನತೆಗೆ ಧಕ್ಕೆ ತಂದಿದ್ದಕ್ಕಾಗಿ ಸೆಕ್ಷನ್ 74, ಸ್ವಯಂಪ್ರೇರಣೆಯಿಂದ ನೋವುಂಟು ಮಾಡಿದ್ದಕ್ಕಾಗಿ ಸೆಕ್ಷನ್ 115(2) ಮತ್ತು ಸಾಮಾನ್ಯ ಉದ್ದೇಶಕ್ಕಾಗಿ ಸೆಕ್ಷನ್ 3(5) ಸೇರಿವೆ.

 

 

Continue Reading
Click to comment

Leave a Reply

Your email address will not be published. Required fields are marked *

Advertisement