Connect with us

ಇತರ

ಫ್ಯಾಶಿಸಂನ ಮೂಲೋತ್ಪಾಟನೆಯಿಂದ ಮಾತ್ರ ಗಣರಾಜ್ಯ ಮತ್ತು ಸಂವಿಧಾನದ ಸಂರಕ್ಷಣೆ ಸಾದ್ಯ : ಅನ್ವರ್ ಸಾದತ್ ಬಜತ್ತೂರು

Published

on

ಪುತ್ತೂರು ಜ 26: ಪ್ರಜಾಪ್ರಭುತ್ವ ದೇಶದಲ್ಲಿ ಫ್ಯಾಶಿಸಂ ಚಿಂತನೆಗಳ ಕಾರ್ಯಸೂಚಿಗಳು, ಇಂದು ಶಾಸನ ಸಭೆಯಲ್ಲಿ ಆದೇಶ ಅಧಿನಿಯಮಗಳಾಗಿ ಜಾರಿಯಾಗುತ್ತಿದೆ, ಫ್ಯಾಶಿಸಂ ಮತ್ತು ಪ್ರಜಾಪ್ರಭುತ್ವ ಎಂಬುದು ಯಾವತ್ತೂ ಒಂದೇ ದಿಕ್ಕಿನಲ್ಲಿ ಸಾಗಲು ಸಾಧ್ಯವಿಲ್ಲ, ಫ್ಯಾಶಿಸಂ ಬಲ ಹೆಚ್ಚಾದಂತೆ ಸಂವಿಧಾನ ಪ್ರತಿಪಾದಿಸಿದ ಜಾತ್ಯತೀತ, ಸಹಬಾಳ್ವೆ ಮತ್ತು ಏಕತೆಯ ಚಿಂತನೆಗಳು ಕ್ಷೀಣಗೊಳ್ಳುತ್ತದೆ,ನಮಗೆ ಘನತೆ ಗೌರವ ಸ್ವಾಭಿಮಾನದ ಬದುಕು ತಂದುಕೊಟ್ಟ ಸಂವಿದಾನವನ್ನು, ಸಂವಿದಾನ ಪ್ರತಿಪಾದಿಸಿದ ಸಹಬಾಳ್ವೆ ಮತ್ತು ಒಕ್ಕೂಟ ವ್ಯವಸ್ಥೆಯನ್ನು ದುರ್ಬಲ ಗೊಳಿಸುವ ಪ್ರಯತ್ನಗಳು ಕಳೆದ ಹನ್ನೊಂದು ವರ್ಷಗಳಿಂದ ದೇಶದಲ್ಲಿ ವೇಗ ಪಡೆಯಿತ್ತಿದೆ, ಜಾತಿ ಧರ್ಮದ ಹೆಸರಿನಲ್ಲಿ ಮೊದಲು ಮನಸ್ಸುಗಳನ್ನು ಒಡೆದವರು ಇಂದು ಅದಿಕಾರಕ್ಕೇರಿ ದೇಶದ ಸಂಪತ್ತನ್ನೇ ಬಹುರಾಷ್ಟ್ರೀಯರಿಗೆ ಅಂಬಾನಿ ಅದಾನಿಗಳಿಗೆ ಬೇಕಾಬಿಟ್ಟಿ ಮಾರಾಟ ಮಾಡುತ್ತಿದ್ದಾರೆ , ನಮ್ಮ ದೇಶ ಮತ್ತು ಇಲ್ಲಿನ ಪರಂಪರೆ ಉಳಿಯಬೇಕಾದರೆ ಸಂವಿಧಾನ ಮತ್ತು ಸಂವಿಧಾನದ ಮೂಲ ಮಂತ್ರವಾದ ಪ್ರಜಾಪ್ರಭುತ್ವ, ಮತ್ತು ಗಣತಂತ್ರ ವ್ಯವಸ್ಥೆಯನ್ನು ಮೊದಲು ಉಳಿಸಬೇಕು, ಅದಕ್ಕಿರುವ ಏಕೈಕ ದಾರಿ ಫ್ಯಾಶಿಸಂನ ಮೂಲೋತ್ಪಾಟನೆ ಮಾತ್ರ ಎಂದು ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು ಹೇಳಿದರು.

 

ಅವರು ಇಂದು SDPI ಜಿಲ್ಲಾ ಸಮಿತಿಯಿಂದ ಪುತ್ತೂರಿನ ಕೂರ್ನಡ್ಕ ದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸಭಾಧ್ಯಕ್ಷತೆ ವಹಿಸಿ ಗಣರಾಜ್ಯೋತ್ಸವದ ಸಂದೇಶ ನೀಡಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಪುತ್ತೂರು ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ವಾಗಿ ಮಾತನಾಡಿ ದೇಶದ ಸಂವಿಧಾನದ ಮಹತ್ವ ಮತ್ತು ಸಂವಿಧಾನವನ್ನು ಉಳಿಸಬೇಕಾದ ವಿಚಾರಗಳ ಬಗ್ಗೆ ಮಾತನಾಡಿದರು
ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಳಕೆಮಜಲು, ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಉಪಾಧ್ಯಕ್ಷರಾದ ಹಮೀದ್ ಸಾಲ್ಮಾರ, ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಸದಸ್ಯರಾದ ಇಬ್ರಾಹಿಂ ಸಾಗರ್‌ರವರು ಮಾತನಾಡಿ ಶುಭಹಾರೈಸಿದರು.

 

 

 

ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ತಲಪಾಡಿ ಸಂವಿಧಾನ ದೀಕ್ಷೆಯನ್ನು ಬೋಧಿಸಿದರು.

ಈ ಸಂದರ್ಭದಲ್ಲಿ ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಅಲೆಕ್ಕಾಡಿ, ಫೀರ್ ಮೊಹಲ್ಲಾ ಜುಮಾ ಮಸೀದಿ ಅಧ್ಯಕ್ಷರಾದ ಕೆ ಹೆಚ್ ಖಾಸಿಂ, ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಅಶ್ರಫ್ ಬಾವು, ಸದಸ್ಯರಾದ ವಿಶ್ವನಾಥ್ ಪುಣ್ಚತ್ತಾರು, ಚುಟುಕು ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಅಧ್ಯಕ್ಷರಾದ ಹಾಜಿ ಅಬ್ದುಲ್ ಸಮದ್ ಬಾವ, ಸಲ್ ಸಬೀಲ್ ಯಂಗ್ ಮೆನ್ಸ್ ಕೂರ್ನಡ್ಕ ಅಧ್ಯಕ್ಷರಾದ ಹೈದರ್ ಚೊಯ್ಸ್, ಎಸ್‌ಡಿಟಿಯು ಪುತ್ತೂರು ತಾಲೂಕು ಅಧ್ಯಕ್ಷರಾದ ಆಸಿಫ್ ಮುಕ್ವೆ ಎಸ್ ಡಿ ಪಿ ಐ ಪುತ್ತೂರು ನಗರಸಭಾ ಅಧ್ಯಕ್ಷರಾದ ಯಹ್ಯಾ ಕೂರ್ನಡ್ಕ ಸಹಿತ ಹಲವು ನಾಯಕರು, ಪಕ್ಷದ ಕಾರ್ಯಕರ್ತರು, ಹಿತೈಷಿಗಳು ಉಪಸ್ಥಿತರಿದ್ದರು.
ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಉಸ್ಮಾನ್ ಕೆದಿಲ ಸ್ವಾಗತಿಸಿ ಕುಂಬ್ರ ಬ್ಲಾಕ್ ಅಧ್ಯಕ್ಷರಾದ ರಿಯಾಝ್ ಬಳಕ್ಕ ನಿರೂಪಿಸಿದರು.

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement