Published
2 months agoon
By
Akkare Newsಪುತ್ತೂರು :ಶ್ರೀಮತಿ ಯಶೋಧ ನಿವೃತ್ತ ಮುಖ್ಯ ಗುರುಗಳು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆಳ್ಳಿಪಾಡಿ ಇವರು ಪ್ರಥಮ ಪಿಯುಸಿ ಸೈನ್ಸ್ ಪಿಸಿಎಂಬಿ ಮತ್ತು ದ್ವಿತೀಯ ಪಿಯುಸಿ ಸೈನ್ಸ್,ಪಿಸಿಎಂಬಿ , ಮ್ಯಾಗ ಜಿನ್ ಪಿಸಿಎಂಬಿ, ಎಂಟ್ರೆನ್ಸ್ ಎಕ್ಸಾಮ್ ಬುಕ್ಸ್ ಪಿಸಿಎಂಬಿ, ಎಸ್ ಎಲ್ ಸಿ ಮಾಡೆಲ್ ಪೇಪರ್ಸ್ , ಇಂಗ್ಲಿಷ್ ಅಂಡ್ ಕನ್ನಡ, M.A ಬುಕ್ಸ್, 7 -10 th text books ಗಳನ್ನು ಕೋಡಿಂಬಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೈಲಜಾ ಭಟ್ ಇವರ ಸಮ್ಮುಖದಲ್ಲಿ ಕೋಡಿಂಬಾಡಿ ಅರಿವು ಕೇಂದ್ರಕ್ಕೆ ನೀಡಿರುತ್ತಾರೆ .
ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಮಲ್ಲಿಕಾ ಅಶೋಕ್ ಪೂಜಾರಿ ಮತ್ತು ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರು ಹಾಗೂ ಗ್ರಂಥಾಲಯ ಮೇಲ್ವಿಚಾರಕಿ ಶ್ರೀಮತಿ ಕುಸುಮ ವಿ ರೈ ಯವರು ಉಪಸ್ಥಿತರಿದ್ದರು.ಇವರಿಗೆ ಗ್ರಾಮ ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ಅರಿವು ಕೇಂದ್ರದ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಲಾಯಿತು.