Published
2 months agoon
By
Akkare Newsಸಾಲ ಮರುಪಾವತಿಸುವಂತೆ ಮೈಕ್ರೊ ಫೈನಾನ್ಸ್ ಕಂಪನಿಯವರು ನಿರಂತರವಾಗಿ ನೀಡುತ್ತಿದ್ದ ಕಿರುಕುಳದಿಂದ ಬೇಸತ್ತ ಸಲೂನ್ ಮಾಲೀಕ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಧರ್ಮಸ್ಥಳ ಸಂಘ ಸೇರಿ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಹಾವೇರಿ ಜಿಲ್ಲೆಯ ಅರಸೀಕೆರೆಯ ಮಾಲತೇಶ ನಾಗಪ್ಪ ಅರಸೀಕೆರೆ (45) ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬೆನ್ನಲ್ಲೇ ಪತ್ನಿ ಗೀತಾ ಅವರು ಬೆಲ್ಸ್ಟಾರ್ ಕಂಪನಿಯ ಪ್ರತಿನಿಧಿ ಜ್ಯೋತಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ವ-ಸಹಾಯ ಸಂಘದ ಅಂಜನಾ ಹಾಗೂ ಐಡಿಎಫ್ಸಿಯ ರಜಾಕ್ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
‘ಮಾಲತೇಶ ಅವರು ಸಲೂನ್ ಅಂಗಡಿ ನಡೆಸುತ್ತಿದ್ದರು. ಮನೆ ಮತ್ತು ಸಲೂನ್ ಅಂಗಡಿ ನಿರ್ವಹಣೆಗಾಗಿ ಧರ್ಮಸ್ಥಳ ಸ್ವ-ಸಹಾಯ ಸಂಘ, ಬೆಲ್ಸ್ಟಾರ್, ಐಡಿಎಫ್ಸಿ ಹಾಗೂ ಇತರೆ ಕಡೆಗಳಲ್ಲಿ ಒಟ್ಟು ₹ 6.45 ಲಕ್ಷ ಸಾಲ ಮಾಡಿದ್ದರು. ವ್ಯಾಪಾರ ಇಲ್ಲದಿದ್ದರಿಂದ, ಸಾಲ ಕಂತು ಕಟ್ಟಲು ಸಾಧ್ಯವಾಗುತ್ತಿರಲಿಲ್ಲ. ನಿತ್ಯವೂ ಸಲೂನ್ ಹಾಗೂ ಮನೆ ಬಳಿ ಬರುತ್ತಿದ್ದ ಆರೋಪಿಗಳು, ಸಾಲದ ಕಂತು ಕಟ್ಟುವಂತೆ ಕಿರುಕುಳ ನೀಡುತ್ತಿದ್ದರೆಂದು ಗೊತ್ತಾಗಿದೆ. ‘ಆರೋಪಿಗಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಿ, ಸಾಲದ ದಾಖಲೆಗಳನ್ನು ಸಂಗ್ರಹಿಸಿ ಪರಿಶೀಲಿಸಲಾಗುವುದು ಎಂದು ಪೊಲೀಸರು ವಿವರಿಸಿದ್ದಾರೆ.