Published
2 months agoon
By
Akkare Newsಯುವಕರು ನಮ್ಮ ರಾಷ್ಟ್ರದ ಸಂಪನ್ಮೂಲರು.ಅವರಿಂದಲೇ ರಾಷ್ಟ್ರ ಬೆಳಗುವುದು.ಹತ್ತೂರಲ್ಲೂ ಶ್ರೇಷ್ಠವಾದ ಊರು ಪುತ್ತೂರು.ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಾಡುತ್ತಿರುವ ವ್ಯಕ್ತಿಗಳು, ವಿದ್ಯಾರ್ಥಿಗಳು, ಸಂಘಸಂಸ್ಥೆಗಳಿಗೆ ಹೆಸರು ಪಡೆದಿರುವ ಪುತ್ತೂರು ಮುತ್ತೂರು.
ಪುತ್ತೂರು ಶಿಕ್ಷಣ ಕಾಶಿ.ಇಲ್ಲಿ ಅನೇಕ ಶಾಲಾಕಾಲೇಜುಗಳು ಮಕ್ಕಳ ಶಿಕ್ಷಣ,ಜೀವನ ಮೌಲ್ಯಗಳನ್ನು ವರ್ಧಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿವೆ.ಇಲ್ಲಿನ ಶತಮಾನದ ಹೊಸ್ತಿಲಲ್ಲಿರುವ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ಇಂದು ರಾಷ್ಟ್ರ ಮಟ್ಟದ ಸಾಧನೆಮಾಡುವ ಹೆಜ್ಜೆಯಿಟ್ಟಿದೆ.ಇಲ್ಲಿನ ವಿದ್ಯಾರ್ಥಿನಿಯರ ಕಬಡ್ಡಿ ತಂಡ ಮಹಾರಾಷ್ಟ್ರದ ಅಮರಾವತಿಯ ಕ್ರೀಡಾಂಗಣದಲ್ಲಿ ಕಬಡ್ಡಿ ಆಟವಾಡಲು ಹೊರಟಿದೆ.ಇಲ್ಲಿನ ವಿದ್ಯಾರ್ಥಿನಿಯರ ಸಾಧನೆಯ ಪ್ರೇರಣಾ ಶಕ್ತಿ ಅಧ್ಯಾಪಕ ಬಾಲಕೃಷ್ಣ ರೈ ಪೊರ್ದಾಲ್.ಗ್ರಾಮೀಣ ಪ್ರದೇಶದವರಾದ ಶ್ರೀಯುತರು ವಿದ್ಯಾರ್ಥಿ ಜೀವನದಿಂದಲೇ ಪ್ರತಿಭಾವಂತರು.ಬೆಟ್ಟಂಪಾಡಿ ನವೋದಯ ಪ್ರೌಢಶಾಲಾ ರಾಜ್ಯ ಪ್ರಶಸ್ತಿ ಪುರಸ್ಕೃತ ಕ್ರೀಡಾ ಶಿಕ್ಷಕ ದಯಾನಂದ ರೈ ಕೋರ್ಮಂಡ ಇವರ ಪ್ರೋತ್ಸಾಹದಿಂದ ಶಿಕ್ಷಣ ಕ್ರೀಡಾ ಕ್ಷೇತ್ರದಲ್ಲಿ ಬೆಳಗಿದವರು.
ಬಾಲಕೃಷ್ಣ ರೈ ಪೊರ್ದಾಲ್ಸಹಶಿಕ್ಷಕರು, ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ದರ್ಬೆ ಪುತ್ತೂರು, ಇವರು ಬಹುಮುಖ ಪ್ರತಿಭಾವಂತ ಯುವ ಸಾಧಕರು.ರಂಗ ಕಲಾವಿದನಾಗಿ,ಸುಮಾರು 250ಕ್ಕಿಂತಲೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿರುವರು.
ರಂಗ ಕಲಾವಿದ, ನಾಟಕ ಕಲಾವಿದ ಮತ್ತು ನಿರ್ದೇಶಕರಾಗಿರುವ ಬಾಲಕೃಷ್ಣ ರೈ ಪೊರ್ದಾಲ್ ಉತ್ತಮವಾಗ್ಮಿ, ಸಂಪನ್ಮೂಲ ವ್ಯಕ್ತಿ, ಕಬಡ್ಡಿ ವೀಕ್ಷಕ ವಿವರಣೆಕಾರರಾಗಿ ಹಲವು ಕಡೆ ಕ್ರೀಡಾಮನ್ನಣೆಗೆ ಪಾತ್ರರಾಗಿರುವರು.ಪುತ್ತೂರು ತಾಲೂಕಿನ ಸರಕಾರಿ ಕಾರ್ಯಕ್ರಮದ ನಿರೂಪಕರಾಗಿ, ಉತ್ತಮ ಸಂಘಟಕ, ಉತ್ತಮ ಬರಹಗಾರ, ಉತ್ತಮ ಕ್ರೀಡಾಪಟು,ಕಬಡ್ಡಿ ರಾಷ್ಟ ಮಟ್ಟದ ತರಬೇತುದಾರರಾಗಿ, ದುಶ್ಚಟ ಮುಕ್ತ ಸಮಾಜ ಕಾರ್ಯಕ್ರಮದ ರಾಜ್ಯ ಸಂಪನ್ಮೂಲ ವ್ಯಕ್ತಿ ಹಾಗೂ ಉತ್ತಮ ಒಬ್ಬ ಸ್ಕೌಟ್ ಕೂಡಾ ಆಗಿ ಜನಾನುರಾಗಿಯಾದವರು.
ಸಾಧನೆಗಳು:-
1.)800 ಕ್ಕಿಂತ ಅಧಿಕ ಕಾರ್ಯಕ್ರಮದ ನಿರೂಪಣೆ
2.)250 ಕ್ಕಿಂತ ಅಧಿಕ ಕನ್ನಡ, ತುಳು ನಾಟಕಗಳ ಅಭಿನಯ
3. )ಕಬಡ್ಡಿಯಲ್ಲಿ 8 ಬಾರಿ ಜಿಲ್ಲಾ ಮಟ್ಟ, 4 ಭಾರಿ ರಾಜ್ಯ ಮಟ್ಟ, 2ಭಾರಿ ಸತತವಾಗಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ
5. )ಸತತ 2ನೇ ಭಾರಿ ರಾಷ್ಟ್ರ ಮಟ್ಟದ ತರಬೇತಿ ದಾರರಾಗಿ ಆಯ್ಕೆ
6. )ಥ್ರೋ ಬಾಲ್ 4 ಭಾರಿ ಜಿಲ್ಲಾ ಮಟ್ಟಕ್ಕೆ ಆಯ್ಕೆ
7. )10 ಕ್ಕಿಂತ ಹೆಚ್ಚು ಮಕ್ಕಳು ಅತ್ಲೇಟಿಕ್ ವಿಭಾಗದಲ್ಲಿ ರಾಜ್ಯ, ರಾಷ್ಟ್ರ ಮಟ್ಟಕ್ಕೆ ಆಯ್ಕೆ.
ಇದೀಗ ತನ್ನ ಸಂಸ್ಥೆಯನ್ನು ಕಬಡ್ಡಿ ಕ್ರೀಡೆಯಲ್ಲಿ,ರಾಷ್ಟ್ರ ಮಟ್ಟದಲ್ಲಿ ಬೆಳಗಿಸಲು ಮಹಾರಾಷ್ಟ್ರದ ಅಮರಾವತಿಗೆ ತಂಡದೊಂದಿಗೆ ಪ್ರಯಾಣ ಬೆಳೆಸಿರುವ ಬಾಲಕೃಷ್ಣ ರೈ ಪೊರ್ದಾಲ್ ಮತ್ತು ಪುಟಾಣಿ ಕ್ರೀಡಾ ಪ್ರತಿಭೆಗಳಿಗೆ ,ಅಧ್ಯಾಪಕ ವೃಂದಕ್ಕೆ ಶುಭಾಶಯಗಳು.ಗೆದ್ದು ಬಂದು ಪುತ್ತೂರಿನ ಕೀರ್ತಿಯನ್ನು ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಿಸಲಿ ಎಂದು ಶುಭ ಹಾರೈಸೋಣ.
ತನ್ನ ಸಾಧನೆಗಳಿಗೆ ಕಾರಣರಾಗಿರುವ,ಹೆತ್ತವರು,ದಯಾನಂದ ರೈ ಕೋರ್ಮಂಡ,ಶಾಲಾ ಸಂಚಾಲಕಿ ಭಗಿನಿ ಪ್ರಶಾಂತಿ ಬಿ, ಮುಖ್ಯ ಶಿಕ್ಷಕಿ ಭಗಿನಿ ವೆನಿಶಾ, ಕಬಡ್ಡಿ ತಂಡ ಮ್ಯಾನೇಜರ್ ವಿಲ್ಮಾ ಫೆರ್ನಾಂಡಿಸ್, ಶಿಕ್ಷಕ ಪೋಷಕ ಹಿರಿಯ ವಿದ್ಯಾರ್ಥಿ ವೃಂದ, ಶಿಕ್ಷಣ ಇಲಾಖೆ ಮತ್ತು ತಾಲೂಕು ಅಧಿಕಾರಿ ವೃಂದದವರನ್ನೆಲ್ಲಾ ಸದಾ ನೆನಪಿಸುವ ಬಾಲಕೃಷ್ಣ ರೈ ಪೊರ್ದಾಲ್ ಅವರ ನಡೆ ನಮ್ಮ ಯುವ ಸಮುದಾಯಕ್ಕೊಂದು ಆದರ್ಶವೇ ಸರಿ.ಶುಭವಾಗಲಿ.
✍️ ನಾರಾಯಣ ರೈ ಕುಕ್ಕುವಳ್ಳಿ.