Connect with us

ಇತರ

ಕರ್ನಾಟಕ Rain: ಮಳೆ.. ಮಳೆ… ನಾಳೆಯಿಂದ ಭಾರಿ ಮಳೆ! ಯಾವ ಯಾವ ಜಿಲ್ಲೆಗೆ?

Published

on

ಮಳೆ ಮಳೆ.. ಮಳೆ.. ಕರ್ನಾಟಕ ರಾಜ್ಯಕ್ಕೆ ಇದೀಗ ಮತ್ತೆ ಮಳೆಯ ಕಾಟ ಶುರುವಾಗುವ ಮುನ್ಸೂಚನೆ ಸಿಕ್ಕಿದೆ. ಕಳೆದ ವರ್ಷ ಸಾಕು ಸಾಕು ಎನಿಸುವಷ್ಟು ಮಳೆ ಬಿದ್ದಿದ್ದರೂ ಇದೀಗ ಮತ್ತೆ ಬೇಸಿಗೆ ಸಮಯದಲ್ಲೂ ಭರ್ಜರಿ ಮಳೆಯ ಮುನ್ಸೂಚನೆ ಸಿಕ್ಕಿದ್ದು, ನಾಳೆಯಿಂದಲೇ ಅಂದ್ರೆ ಸೋಮವಾರವೇ ಭಾರಿ ಮಳೆ ಸುರಿಯುವ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ.
ಅರೆರೆ ಹಾಗಾದ್ರೆ ಭರ್ಜರಿ ಮಳೆ ಸುರಿಯುವ ಜಿಲ್ಲೆಗಳು ಯಾವುವು?

 

ಇದೀಗ ಅಕಾಲಿಕ ಮಳೆಯಿಂದಾಗಿ ಎಲ್ಲಾ ಅಲ್ಲೋಲ, ಕಲ್ಲೋಲ ಆಗಿ ಹೋಗುತ್ತಿದೆ. ಹೀಗೆ ಮತ್ತೊಮ್ಮೆ ಅಕಾಲಿಕ ಮಳೆಯು ಅಪ್ಪಳಿಸುವ ಎಲ್ಲಾ ಮುನ್ಸೂಚನೆ ಇದೀಗ ಸಿಗುತ್ತಿದ್ದು, ಈ ಹಿನ್ನೆಲೆ ಜನರು ಕೂಡ ಚಿಂತೆ ಮಾಡುವಂತೆ ಆಗಿದೆ. ಇದನ್ನೆಲ್ಲಾ ಈಗ ನೋಡುತ್ತಿದ್ದರೆ, ಮಳೆ ಕೋಪ ಕಡಿಮೆ ಆಗಿಲ್ಲ ಅಂತಾ ಕಾಣ್ತಿದೆ. ಹೀಗಾಗಿ 2024 ಕಳೆದು 2025 ಶುರುವಾಗಿದ್ದರೂ ಮಳೆ ಅರ್ಭಟ ಕಡಿಮೆ ಆಗುತ್ತಿಲ್ಲ.

ಮಳೆ.. ಮಳೆ… ಭರ್ಜರಿ ಮಳೆ!

ಇನ್ನೇನು ಬೇಸಿಗೆ ಕಾಲವು ಶುರುವಾಯ್ತು ಬಿಡು ಅಂತ ಖುಷಿ ಪಡುವ ಸಮಯದಲ್ಲಿ ಮತ್ತೆ ಮಳೆ ಅಬ್ಬರ ಹೆಚ್ಚಾಗಿದೆ. ಸೋಮವಾರ ನಂತರ ಮತ್ತೆ ಮಳೆಯ ಮೋಡಗಳು ಹಲವು ಜಿಲ್ಲೆಗಳನ್ನು ಆವರಿಸಲಿವೆ. ಬೇಸಿಗೆಯಲ್ಲಿ ಮಳೆ ಸುರಿಯುತ್ತಿದ್ದರೂ ಭರ್ಜರಿಯಾಗಿ ಸುರಿಯುವ ಬಗ್ಗೆ ಈಗ ಮುನ್ನೆಚ್ಚರಿಕೆ ನೀಡಲಾಗಿದೆ. ಹಾಗಾದ್ರೆ ಭರ್ಜರಿಯಾಗಿ ಮಳೆ ಸುರಿಯುವ ಜಿಲ್ಲೆಗಳು ಯಾವು? ಈ ಬಗ್ಗೆ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ಏನು?

ಯಾವ ಯಾವ ಜಿಲ್ಲೆಗಳಲ್ಲಿ ಮಳೆ?

ಮಳೆ.. ಮಳೆ.. ಮಳೆ.. ಯಾವ ಕಾರಣಕ್ಕೆ ಈ ರೀತಿಯ ಮಳೆ ಸುರಿಯುತ್ತಿದೆಯೋ ಗೊತ್ತಿಲ್ಲ. ಬೆಂಗಳೂರು ಸೇರಿದಂತೆ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಮಂಡ್ಯ, ಮೈಸೂರು & ಚಾಮರಾಜನಗರ ಭಾಗದಲ್ಲಿ ಇದೀಗ ಭಾರಿ ಮಳೆಯ ಸಾಧ್ಯತೆ ಬಗ್ಗೆ ಮುನ್ಸೂಚನೆ ಸಿಕ್ಕಿದೆ. ಹಾಗೇ ತಮಿಳುನಾಡು ರಾಜ್ಯದ ಹಲವು ಭಾಗಗಳಲ್ಲಿ ಭಾನುವಾರವೇ ಮಳೆ ಶುರುವಾಗಲಿದ್ದು, ಈ ಮೋಡಗಳು ಸೋಮವಾರದ ನಂತರ ಕರ್ನಾಟಕದ ದಕ್ಷಿಣ ಭಾಗ ಸೇರಿದಂತೆ ರಾಜಧಾನಿ ಬೆಂಗಳೂರಿಗೂ ಆವರಿಸುವ ಮುನ್ನೆಚ್ಚರಿಕೆ ನೀಡಲಾಗಿದೆ.

ಅಕಾಲಿಕ ಮಳೆಗೆ ಕನ್ನಡಿಗರು ಸುಸ್ತು!

ಮಳೆ ಆರ್ಭಟ ಇಷ್ಟಕ್ಕೇ ಸೈಲೆಂಟ್ ಆಗುವ ಯಾವುದೇ ಲಕ್ಷಣ ಕೂಡ ಕಾಣುತ್ತಿಲ್ಲ. ನಿಮಗೆಲ್ಲಾ ಗೊತ್ತಿರುವಂತೆ, ಬಂಗಾಳ ಕೊಲ್ಲಿ ಭಾಗದಲ್ಲಿ ಪದೇ ಪದೇ ವಾಯುಭಾರ ಕುಸಿತ ಉಂಟಾಗುತ್ತಿದೆ. ವಾಯುಭಾರ ಕುಸಿತ & ಚಂಡಮಾರುತ ಅಪ್ಪಳಿಸುತ್ತಿರುವ ಹಿನ್ನೆಲೆಯಲ್ಲಿ ದೊಡ್ಡ ಅವಾಂತರ ಸೃಷ್ಟಿಯಾಗ್ತಿದೆ. ಹೀಗಾಗಿ ಪದೇ ಪದೇ ಮಳೆ ಬರುತ್ತಿದ್ದು, ಕನ್ನಡಿಗರು ಹೀಗೆ ಅಕಾಲಿಕ ಮಳೆಯ ಪರಿಣಾಮ ಬೆಚ್ಚಿ ಬಿದ್ದಿದ್ದಾರೆ. ಮಳೆ ಯಾಕಪ್ಪಾ ಬರುತ್ತೆ? ಅಂತಾನೂ ಗೊಣಗುತ್ತಿದ್ದಾರೆ. ಈ ಸಮಯದಲ್ಲೇ ಬೇಸಿಗೆ ಹೊತ್ತಲ್ಲೂ ಮಳೆರಾಯ ಅಬ್ಬರಿಸಲು ಸಜ್ಜಾಗಿದ್ದಾನೆ. ಹೀಗಾಗಿ ಬೆಳೆ ಉಳಿಸಿಕೊಳ್ಳಲು ರೈತರು ಚಿಂತೆ ಮಾಡುವಂತೆ ಆಗಿದೆ.

 

 

 

Continue Reading
Click to comment

Leave a Reply

Your email address will not be published. Required fields are marked *

Advertisement