Published
3 weeks agoon
By
Akkare Newsಪುತ್ತೂರು: ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವಕ್ಕೆ ಮುಂಡ್ಯ ಹಾಕುವ ಸಂದರ್ಭ ಗದ್ದೆಯಲ್ಲಿ ಚೆಂಡು ಉರುಳಿಸುವ ಮತ್ತು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಯಲ್ಲಿ ಕಟ್ಟೆಯಿಂದ ಕಟ್ಟೆಗೆ ಶ್ರೀದೇವರ ವಸ್ತ್ರ ಕೊಂಡೊಯ್ಯುವ ಚಾಕ್ರಿ ಸೇವೆ ಮಾಡುತ್ತಿದ್ದ ಬಲ್ನಾಡು ನಿವಾಸಿ ಉಮೇಶ್ ಗೌಡ(47ವ) ರವರು ಮಾ.14 ರಂದು ಮಧ್ಯಾಹ್ನ ಹೃದಯಾಘಾತದಿಂದ ನಿಧನರಾದರು.
ಬಲ್ನಾಡು ಕುಕ್ಕಪ್ಪ ಗೌಡರ ಪುತ್ರರಾಗಿರುವ ಉಮೇಶ್ ಗೌಡ ಅವರು ದೇವಸ್ಥಾನದ ಗದ್ದೆಯ ಬಳಿ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೊಂದಿದ್ದರು. ಮಧ್ಯಾಹ್ನ ಮನೆಯಲ್ಲಿರುವ ವೇಳೆ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ತಕ್ಷಣ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆಗಲೇ ಅವರು ನಿಧನರಾದರು.