Published
2 weeks agoon
By
Akkare Newsಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಂಬಂಧಿಸಿದ ಜಾಗವೊಂದು ನ್ಯಾಯಾಲಯದ ಮೂಲಕ ಮತ್ತೆ ದೇವಾಲಯದ ಸುಪ ರ್ದಿಗೆ ಬಂದಿದ್ದು, ಅದರಲ್ಲಿದ್ದ ಕಟ್ಟಡದ ತೆರವು ಕಾರ್ಯ ನಡೆಸಲಾಯಿತು.
ಸುಬ್ರಹ್ಮಣ್ಯದ ಕಾಶಿಕಟ್ಟೆ ರಥಬೀದಿಯ ಮಧ್ಯೆ ಅಂಚೆ ಕಚೇರಿ ಮುಂಭಾಗದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹಾಗೂ ಕುಂಞಕ್ಕ ಎಂಬವರಿಗೆ ಜಾಗದ ತಕರಾರು ಇತ್ತು. ಅದಕ್ಕೆ ಸಂಬಂಧಿಸಿದ ತಕರಾರು ನ್ಯಾಯಾಲಯದಲ್ಲಿದ್ದು, ಈ ಪ್ರಕರಣ ನ್ಯಾಯಾಲಯದಲ್ಲಿ ಇತ್ಯರ್ಥವಾಗಿದ್ದು, ಜಾಗವು ದೇವಸ್ಥಾನಕ್ಕೆ ಸಂಬಂಧಿಸಿದ ಜಾಗವೆಂದು ಆದೇಶವಾಗಿತ್ತು. ಇದರನ್ವಯ ಸುಳ್ಯ ನ್ಯಾಯಲಯದ ಆದೇಶಿಕ ಜ್ಯಾರಿಕಾರರು(ಅಮೀನ್) ಹಾಗೂ ನ್ಯಾಯಾಲಯದ ಸಿಬಂದಿ ಖುದ್ದಾಗಿ ಹಾಜರಿದ್ದು, ಸದರಿ ಸ್ಥಳವನ್ನು ದೇವಾಲಯಕ್ಕೆ ಹಸ್ತಾಂತರಿಸಲಾಗಿದೆ. ಆ ಜಾಗದಲ್ಲಿದ್ದ ಹಳೆ ಕಟ್ಟಡ ತೆರವು ಕಾರ್ಯಾಚರಣೆ ನಡೆಯಿತು.