Published
4 hours agoon
By
Akkare Newsಪುತ್ತೂರು: ಬೆಲೆ ಏರಿಕೆ ಮಾಡುತ್ತಿರುವ ಕೇಂದ್ರ ಸರಕಾರದ ವಿರುದ್ಧ ಎ.26ರಂದು ಮಂಗಳೂರಿನಲ್ಲಿ ಕಾಂಗ್ರೆಸ್‌ನಿಂದ ನಡೆಯಲಿರುವ ಪ್ರತಿಭಟನೆಯನ್ನು ಯಶಸ್ವಿ ಮಾಡುವುದು ಹಾಗೂ ಕಾಂಗ್ರೆಸ್ ಕಾರ್ಯಕಾರಿಣಿ ವಲಯ ತರಬೇತಿ, ಸಮ್ಮೇಳನ ಹಾಗೂ ಶಾಸಕ ಅಶೋಕ್ ಕುಮಾರ್ ರೈಯವರು 2 ವರ್ಷದ ಪೂರೈಸಿದ ಸಂಭ್ರಮದ ದಿನಾಚರಣೆಯ ಅಂಗವಾಗಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ನಿಯೋಗವು ಎ.22ರಂದು ಗ್ರಾಮ ಭೇಟಿ ಹಾಗೂ ಬೂತ್ ಅಧ್ಯಕ್ಷರ ಭೇಟಿ ನಡೆಯಲಿದೆ.
ಬೆಳಿಗ್ಗೆ ಬೆಳಗ್ಗೆ 10ಕ್ಕೆ ನರಿಮೊಗರು, 10:30 ಮುಂಡೂರು, 11ಕ್ಕೆ ಸರ್ವೆ, 11:30 ಕೆದಂಬಾಡಿ, ಮಧ್ಯಾಹ್ನ 12ಕ್ಕೆ ಕೆಯ್ಯರು, 12 ಕೊಳ್ತಿಗೆ, 12.30 ಅರಿಯಡ್ಕ, 1ಕ್ಕೆ ಮಾಡೂರು, 01:30 ನೆ.ಮುಳ್ಳೂರು, 2:30 ಪಡವನ್ನೂರು, 3 ಬಡಗನ್ನೂರು, 3:30 ನಿಡ್ನಳ್ಳಿ, ಸಂಜೆ ೪ ಪಾಣಾಜೆ, 4:30 ಬೆಟ್ಟಂಪಾಡಿ, 5 ಒಳಮೊಗರು, 5:30 ಅರ್ಯಾಪು ಹಾಗೂ 6 ಕುರಿಯದಲ್ಲಿ ಗ್ರಾಮ ಭೇಟಿ ನಡೆಯಲಿದೆ.
ಪಕ್ಷದ ಪ್ರಮುಖರು, ವಲಯ ಅಧ್ಯಕ್ಷರು, ಬೂತ್ ಅಧ್ಯಕ್ಷರು, ಮುಂಚೂಣಿ ಘಟಕದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ತಮ್ಮ ವಲಯದ ಸಭೆಯಲ್ಲಿ ಭಾಗವಹಿಸುವಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪ್ರಸಾದ್ ಅಳ್ವ ತಿಳಿಸಿದ್ದಾರೆ.