Connect with us

ಅಭಿನಂದನೆ

ಪಿಯುಸಿ ಪರೀಕ್ಷೆ : ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿದ ಶಾಸಕರು

Published

on

ವಿದ್ಯಾರ್ಥಿಗಳ ಸಾಧನೆ ಕ್ಷೇತ್ರಕ್ಕೆ ಹೆಮ್ಮೆ ತಂದಿದೆ; ಶಾಸಕ ಅಶೋಕ್ ರೈ

ಪುತ್ತೂರು: ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಯನ್ನು ಮಾಡಿದ್ದು, ರಾಜ್ಯಮಟ್ಟದಲ್ಲೂ ನಮ್ಮ ವಿದ್ಯಾರ್ಥಿಗಳು ಮಿಂಚಿದ್ದಾರೆ ಇದು ನಮ್ಮ ಕ್ಷೇತ್ರಕ್ಕೆ ಹೆಮ್ಮೆಯಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು. ಅವರು ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪಿಯುಸಿಯಲ್ಲಿ ಅತ್ಯಧಿಕ ಅಂಕಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ನೆರವೇರಿಸಿ ಮಾತನಾಡಿದರು.
ದಕ ಜಿಲ್ಲೆಯ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವಿದೆ. ಕಲಿಕೆ ಹಾಗೂ ಕಲಿಕಾ ಸಂಸ್ಥೆಗಳು ಶಿಸ್ತುಬದ್ದವಾಗಿರುವುದೇ ಇದಕ್ಕೆ ಕಾರಣ, ವಿದ್ಯಾರ್ಥಿಗಳು ಹೆಚ್ಚು ಅಂಕಪಡೆಯಲು ವಿದ್ಯಾಲಯ, ಶಿಕ್ಷಕರ ಜೊತೆ ಪೋಷಕರ ಪಾತ್ರವೂ ಇದೆ. ಒಬ್ಬ ವಿದ್ಯಾರ್ಥಿಗೆ ಕಲಿಕೆಗೆ ಉತ್ತಮ ವಾತಾವರಣ ಮಾಡಿಕೊಡುವುದು ಪೋಷಕರ ಕರ್ತವ್ಯ, ಆ ಕೆಲಸವನ್ನು ಪ್ರತೀಯೊಬ್ಬ ಪೋಷಕರೂ ಮಾಡುತ್ತಿದ್ದಾರೆ ಎಂಬುದು ಈ ಬಾರಿ ಪಿಯುಸಿ ಫಲಿತಾಂಶದಲ್ಲಿ ಗೊತ್ತಾಗಿದೆ ಎಂದು ಹೇಳಿದರು.

 

ಐಎಎಸ್, ಐಪಿಎಸ್ ಆಗುವ ಕನಸು ಕಾಣಬೇಕು
ಹೆಚ್ಚಿನ ವಿದ್ಯಾರ್ಥಿಗಳು ಡಾಕ್ಟರ್ , ಇಂಜಿನಿಯರ್ ಆಗುವ ಕಸನನ್ನು ಹೊತ್ತುಕೊಂಡಿರುತ್ತಾರೆ. ಆದರೆ ಐಎಎಸ್ ಮತ್ತು ಐಪಿಎಸ್ ಆಗುವ ಕನಸನ್ನೂ ವಿದ್ಯಾರ್ಥಿಗಳು ಕಾಣಬೇಕು. ಹೆಚ್ಚಿನ ಐಎಎಸ್ ಅಧಿಕಾರಿಗಳು ಉತ್ತರ ಭಾರತದವರೇ ಆಗಿದ್ದು ಅದು ಅವರ ಕಲಿಕಾ ಸಾಮರ್ಥ್ಯವನ್ನು ತೋರಿಸುತ್ತದೆ. ನಮ್ಮ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಐಎಎಸ್ ಅಥವಾ ಐಪಿಎಸ್ ಆಗಬೇಕು ಎಂದು ಅತೀ ಹೆಚ್ಚು ಆಸೆಪಡುವವರಲ್ಲಿ ನಾನೂ ಒಬ್ಬನಾಗಿದ್ದೇನೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಇಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡುವ ಮೂಲಕ ಅವರಿಗೆ ಕಲಿಕೆಗೆ ಹೆಚ್ಚಿನ ಅವಕಾಶವನ್ನು ನೀಡಲಾಗುವುದು ಎಂದು ಹೇಳಿದ ಶಾಸಕರು ತನ್ನ ಟ್ರಸ್ಟ್ ಮೂಲಕ ವಿದ್ಯಾರ್ಥಿಗಳ ಕಲಿಕೆಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ನೀಡುವಲ್ಲಿ ಸಿದ್ದನಿದ್ದೇನೆ ಎಂದು ಹೇಳಿದರು.

 

ಹಲಸಿನ ಗಿಡ ವಿತರಣೆ
ಸನ್ಮಾನಗೊಂಡ ಪ್ರತೀ ವಿದ್ಯಾರ್ಥಿಗೆ ಶಾಸಕರು ಹಲಸಿನ ಗಿಡವನ್ನು ವಿತರಿಸಿದರು. ಪರಿಸರವನ್ನು ಪ್ರೀತಿಸುವ ಉದ್ದೇಶದಿಂದ ಶಾಸಕರು ಈ ಗಿಡವನ್ನು ವಿತರಣೆ ಮಾಡಿದರು.

 

ಕಾರ್ಯಕ್ರಮದಲ್ಲಿ ಪಿಯುಸಿಯಲ್ಲಿ ಉತ್ತಮ ಅಂಕಪಡೆದ ವಿದ್ಯಾರ್ಥಿಗಳಾದ ವಿಜ್ಞಾನ ವಿಭಾಗದಲ್ಲಿ ಉತ್ತಮ ಅಂಕಪಡೆದ ವಿದ್ಯಾರ್ಥಿಗಳಾದ ಅಜಿತ್ ಕುಮಾರ್ ಕೆ ಎಸ್ ಅಂಬಿಕಾ ವಿದ್ಯಾಲಯ, ಹಿಮನಿ ಎ ಸಿ ಅಂಬಿಕಾ ವಿದ್ಯಾಲಯ ಬಪ್ಪಳಿಗೆ, ಉತ್ತಮ್ ಜಿ ಅಂಬಿಕಾ ವಿದ್ಯಾಲಯ ನೆಲ್ಲಿಕಟ್ಟೆ, ಕೆ ಎಸ್ ಮನೀಷಾ ಅಂಬಿಕಾ ವಿದ್ಯಾಲಯ, ಶ್ರೀ ರಕ್ಷಾ ವಿವೇಕಾನಂದ ಪ ಪೂ ಕಾಲೇಜು ಪುತ್ತೂರು, ಪ್ರಾಪ್ತಿ ಪಿ ವಿ ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿ, ಕೀರ್ತಿ ವರ್ಧನ ಎಂ ವಿವೇಕಾನಂದ ಪ ಪೂ ಕಾಲೇಜು ಪುತ್ತೂರು, ವೈದೇಹಿ ಸರಕಾರಿ ಪ ಪೂ ಕಾಲೇಜು ಬೆಟ್ಟಂಪಾಡಿ.
ವಾಣಿಜ್ಯ ವಿಭಾಗ: ಚೈತನ್ಯ ಎನ್ ವಿವೇಕಾನಂದ ಪ ಪೂ ಕಾಲೇಜು ಪುತ್ತೂರು, ಶ್ರಾವ್ಯ ಎಚ್ ಬಿ ಸರಕಾರಿ ಪ ಪೂ ಕಾಲೇಜು ಕೊಂಬೆಟ್ಟು, ಅನುಶ್ರೀ ವಿವೇಕಾನಂದ ಪ ಪೂ ಕಾಲೇಜು ಪುತ್ತೂರು, ಫಿದಾ ಹಲೀಮಾ ಸಂತಪಿಲೋಮಿನಾ ಪ ಪೂ ಕಾಲೇಜು, ಅದಿಥಿ ಡಿ ಸಂತಫೀಲೋಮಿನಾ ಪ ಪೂ ಕಾಲೇಜು, ಎಂ ದೀಪಾ ನಾಯಕ್ ಸಂತಫಿಲೋಮಿನಾ ಪ ಪೂ ಕಾಲೇಜು, ನೀತಿ ಎನ್ ಬಿ ಸಂತಫಿಲೋಮಿನಾ ಪ ಪೂ ಕಾಲೇಜು, ಧೀಕ್ಷಾ ಜೋಗಿ ವಿವೇಕಾನಂದ ಪಪೂ ಕಾಲೇಜು ಪುತ್ತೂರು

 

 

ಕಲಾ ವಿಭಾಗ: ಪಿ ಯುಕ್ತಾಶ್ರೀ ಆಂದ್ರಪ್ರದೇಶ ವಿವೇಕಾನಂದ ಪ ಪೂ ಕಾಲೇಜು ಪುತ್ತೂರು , ತೃಪ್ತಿ ಎಕೆ ವಿವೇಕಾನಂದ ಪಪೂ ಕಾಲೇಜು ಪುತ್ತೂರು , ಜೀವನ್ ಎನ್ ಸರಕಾರಿ ಪ ಪೂ ಕಾಲೇಜು ಕೊಂಬೆಟ್ಟುರವರನ್ನು ಶಾಲುಹೊದಿಸಿ, ಪೇಟತೊಡಿಸಿ ಮತ್ತು ಸ್ಮರಣಿಕೆಯನ್ನು ನೀಡಿ ಗೌರವಿಸಿದರು.

ಟ್ರಸ್ಟ್‌ನ ಸಿಬ್ಬಂದಿ ಲಿಂಗಪ್ಪ ಸ್ವಾಗತಿಸಿದರು. ಸಿಬ್ಬಂದಿಗಳಾದ ರಚನಾ, ಜುನೈದ್ ಕಾರ್ಯಕ್ರಮ ನಿರ್ವಹಿಸಿದರು. ಶಾಸಕರ ಪಿ ಎ ರಂಜಿತ್ ಸುವರ್ಣ ಕಾರ್ಯಕ್ರಮ ಸಂಘಟಿಸಿದರು.

 

Continue Reading
Click to comment

Leave a Reply

Your email address will not be published. Required fields are marked *

Advertisement