ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ಗುಡ್ ನ್ಯೂಸ್: ವಾಹನಗಳಿಗೆ ಎಚ್ ಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಕೆ ಗಡುವು ವಿಸ್ತರಣೆಯಾಗಲಿವೆ :ಎಲ್ಲಿಯವರೆಗೂ ಅವಕಾಶ??

Published

on

ಬೆಂಗಳೂರು: ವಾಹನಗಳ ಹಳೆಯ ನಂಬರ್‌ ಪ್ಲೇಟ್‌ ಬದಲಾಯಿಸಿ ಹೈ ಸೆಕ್ಯುರಿಟಿ ರಿಜಿಸ್ಪ್ರೇಷನ್‌ ಪ್ಲೇಟ್‌ (ಎಚ್‌ಎಸ್‌ಆರ್‌ಪಿ) ಅಳವಡಿಕೆಗೆ ನೀಡಿದ್ದ ಗಡುವು ನವೆಂಬರ್‌ 17ಕ್ಕೆ ಮುಗಿಯಲಿದೆ. ಆದರೆ, ಶೇ.95ಕ್ಕೂ ಅಧಿಕ ವಾಹನ ಬಾಕಿ ಇರುವ ಹಿನ್ನೆಲೆ ರಾಜ್ಯ ಸರ್ಕಾರವು 2-3 ತಿಂಗಳ ಮಟ್ಟಿಗೆ ಕಾಲಾವಕಾಶ ನೀಡಿ ಅಂತಿಮ ದಿನಾಂಕ ವಿಸ್ತರಣೆ ಮಾಡಲಿದೆ.

 

ರಾಜ್ಯದಲ್ಲಿ ಎರಡು ಕೋಟಿ ಹಳೆಯ ವಾಹನಗಳು ಈ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳಡಿಸಿಕೊಳ್ಳಬೇಕು. ಆದರೆ, ಇದುವರೆಗೆ ಅಳವಡಿಕೆ ಆಗಿದ್ದೇ ಮೂರು ಲಕ್ಷ ವಾಹನಗಳು. ಈ ಮಂದಗತಿಯ ಸ್ಪಂದನೆ ಹಿನ್ನೆಲೆಯಲ್ಲಿ ಗಡುವು ವಿಸ್ತರಣೆಗೆ ಸಾರಿಗೆ ಇಲಾಖೆ ಚಿಂತನೆ ನಡೆಸಿದ್ದು, ಈ ಸಂಬಂಧ ಬುಧವಾರ (ನವೆಂಬರ್‌ 15ರಂದು) ಆದೇಶ ಹೊರಬೀಳಲಿದೆ.

 

ಈ ಬಗ್ಗೆ ಮಾತನಾಡಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು, ” ಸೋಮವಾರ ಅಧಿಕಾರಿಗಳ ಜತೆ ಸಭೆ ನಡೆಸಿ ಎಚ್‌ಎಸ್‌ಆರ್‌ಪಿ ಗಡುವು ವಿಸ್ತರಣೆಗೆ ಅನುಮತಿ ನೀಡಿದ್ದೇನೆ. ಈ ಬಗ್ಗೆ ಬುಧವಾರ ಸರ್ಕಾರಿ ಆದೇಶ ಹೊರಬೀಳಲಿದೆ ” ಎಂದು ತಿಳಿಸಿದ್ದಾರೆ.

 

Explainer Video: ನಿಮ್ಮ ವಾಹನದದಲ್ಲಿ ಇದೆಯಾ HSRP ನಂಬರ್‌ ಪ್ಲೇಟ್? ಪ್ರಯೋಜನ ಏನು?

ಎಲ್ಲಿಯವರೆಗೂ ವಿಸ್ತರಣೆಯಾಗಬಹುದು?

ನಿತ್ಯ 2 ರಿಂದ 3 ಲಕ್ಷ ವಾಹನಗಳು ಈ ನಂಬರ್‌ ಪ್ಲೇಟ್‌ ಅಳವಡಿಸಿಕೊಳ್ಳಬೇಕಿತ್ತು. ಅರಿವಿನ ಕೊರತೆಯಿಂದ ನಿರೀಕ್ಷಿತ ಮಟ್ಟದಲ್ಲಿ ಅಳವಡಿಕೆ ಕಾರ್ಯ ಆಗಿಲ್ಲ. ಇಂದಿಗೂ 1.9 ಕೋಟಿಗೂ ಅಧಿಕ ವಾಹನಗಳು ಬಾಕಿ ಇದೆ. ಹೀಗಾಗಿ, ಕನಿಷ್ಠ ಮೂರು ತಿಂಗಳು ವಿಸ್ತರಿಸಲು ಸಾರಿಗೆ ಇಲಾಖೆ ಉದ್ದೇಶಿಸಿದೆ. ಅಂದರೆ, ಫೆಬ್ರವರಿ 17 ಕೊನೆಯ ದಿನಾಂಕ ಆಗಲಿದೆ ಎನ್ನಲಾಗಿದೆ. ಆದರೆ, ಅಂತಿಮ ಆದೇಶ ಹೊರಬಿದ್ದ ಬಳಿಕವೇ ದಿನಾಂಕ ಖಚಿತವಾಗಲಿದೆ.

ಸಾಮಾನ್ಯ ನೋಂದಣಿ ಫ‌ಲಕಗಳನ್ನು ಬದಲಾಯಿಸಿ ಎಚ್‌ಎಸ್‌ಆರ್‌ಪಿ ಅಳವಡಿಸಿಕೊಂಡ ವಾಹನಗಳ ಸಂಖ್ಯೆ ರಾಜ್ಯದಲ್ಲಿ ಅಂದಾಜು 2ರಿಂದ 2.5 ಲಕ್ಷ ಆಗಿದೆ. ಸಾಕಷ್ಟು ವಾಹನಗಳು ಇಂದಿಗೂ ಬಾಕಿ ಇದೆ. ಮುಂದೂಡಿರುವ ಗಡವು ಶೀಘ್ರವೇ ತಿಳಿಸಲಾಗುವುದು ಎಂದು ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ (ಪ್ರವರ್ತನ) ಸಿ. ಮಲ್ಲಿಕಾರ್ಜುನ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

 

 

ಕೇಂದ್ರ ಸರ್ಕಾರದ ನಿಯಮ

ಕೇಂದ್ರ ಸಾರಿಗೆ ಇಲಾಖೆ ಆದೇಶದಂತೆ 2019ರ ಏ.1ಕ್ಕೂ ಮುನ್ನ ನೋಂದಣಿಯಾದ, ಖರೀದಿಸಿದ ವಾಹನಗಳಿಗೆ ಈ ವರ್ಷದ ನ.17ರ ವರೆಗೆ ಕಡ್ಡಾಯವಾಗಿ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಸುವಂತೆ ಸೂಚಿಸಲಾಗಿತ್ತು. ಕೇಂದ್ರ ಸರಕಾರ ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯವು ಆದೇಶ ಹೊರಡಿಸಿದೆ. ಇದೀಗ ಆ ಹಳೆ ವಾಹನಗಳ ನೋಂದಣಿ ಫಲಕಗಳನ್ನು ಬದಲಿಸಿ ಕಡ್ಡಾಯವಾಗಿ ಎಚ್‌ಎಸ್‌ಆರ್‌ಪಿ ಅಳವಡಿಸಬೇಕು ಎಂದು ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿತ್ತು.

ಹಲವರಲ್ಲಿ ಗೊಂದಲ

ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಬಗ್ಗೆ ವಾಹನಗಳ ಮಾಲೀಕರು ಗೊಂದಲದಲ್ಲಿಇದ್ದಾರೆ. ನಂಬರ್‌ ಪ್ಲೇಟ್‌ ಎಲ್ಲಿ ಸಿಗುತ್ತದೆ, ಅದನ್ನು ಅಳವಡಿಸುವವರು ಯಾರು? ಅದರ ಬಳಕೆಯಿಂದ ಲಾಭ ಏನು ಎಂಬುದರ ಬಗ್ಗೆ ಗ್ರಾಮೀಣ ಜನರಿಗೆ ಇನ್ನೂ ತಿಳಿದಿಲ್ಲ. ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕಾಗಿದೆ. ಆದರೆ, ಇಲ್ಲಿವರೆಗೂ ಅಂತಹ ಪ್ರಯತ್ನ ನಡೆಯದಿರುವುದು ಕಂಡು ಬಂದಿಲ್ಲ. ಹಲವು ಸಾರ್ವಜನಿಕರು ನಿತ್ಯ ಸಾರಿಗೆ ಇಲಾಖೆ ಕಚೇರಿಗೆ ಹೋಗಿ ಮಾಹಿತಿ ಪಡೆಯುತ್ತಾರೆ ಎಂದು ಹೇಳುತ್ತಾರೆ ಅಧಿಕಾರಿಯೊಬ್ಬರು.

ಜಾಗೃತಿಗೆ ಕ್ರಮ ವಹಿಸಲಾಗುತ್ತದೆ

ಅವಧಿ ವಿಸ್ತರಣೆಯೊಂದಿಗೆ ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ವ್ಯಾಪಕ ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳಲಾಗುವುದು. ವಾಹನ ಸವಾರರ ಸಹಕಾರ ಕೂಡ ಈ ನಿಟ್ಟಿನಲ್ಲಿ ಮುಖ್ಯವಾಗಿದೆ. ಹಾಗಾಗಿ, ಈ ಅಭಿಯಾನಕ್ಕೆ ಕೈಜೋಡಿಸಬೇಕು. ಒಇಎಂ (ಒರಿಜಿನಲ್‌ ಇಕ್ವಿಪ್‌ಮೆಂಟ್‌ ಮ್ಯಾನ್ಯುಫ್ಯಾಕ್ಚರರ್‌)ಗಳಿಂದ ಅನುಮೋದಿಸಲ್ಪಟ್ಟ ಮಾರಾಟಗಾರರು ಮತ್ತು ವಿತರಕರು (ಡೀಲರ್‌) ಮಾತ್ರ ಎಚ್‌ಎಸ್‌ಆರ್‌ಪಿ ಅಳವಡಿಕೆ ಮಾಡುತ್ತಾರೆ. ಅದೂ ಆನ್‌ಲೈನ್‌ ಮೂಲಕವೇ ಕೋರಿಕೆ ಸಲ್ಲಿಸುವುದು ಅಗತ್ಯ.ಎಚ್‌ಎಸ್‌ಆರ್‌ಪಿ ಅಳವಡಿಕೆ ವಿಧಾನಕ್ಕೆ ಇಲ್ಲಿದೆ ಮಾಹಿತಿ

https://transpot.karnataka.gov.in ಅಥವಾ www.siam.in ಭೇಟಿ ನೀಡಿ.

Continue Reading
Click to comment

Leave a Reply

Your email address will not be published. Required fields are marked *

Advertisement