Connect with us

ಇತ್ತೀಚಿನ ಸುದ್ದಿಗಳು

ಕೆ ಪಿ ಟಿ ಸಿ ಎಲ್ ಡಿಪ್ಲಾಮೋ ಇಂಜಿನಿಯರ್ ಅಸೋಸಿಯೇಷನ್ (ರಿ) ಬೆಂಗಳೂರು ಇದರ ರಾಜ್ಯಾಧ್ಯಕ್ಷರಾಗಿ ಪುತ್ತೂರಿನ ರಾಮಚಂದ್ರ .ಎ ಆಯ್ಕೆ

Published

on

ಕೆಪಿಟಿಸಿಎಲ್ ಡಿಪ್ಲೋಮಾ ಇಂಜಿನಿಯರ್ ಅಸೋಸಿಯೇಷನ್ (ರಿ). ಬೆಂಗಳೂರು ಇದರ ಕೇಂದ್ರಕಾರಿ ಸಮಿತಿಯ ಚುನಾವಣೆಯಲ್ಲಿ ಶ್ರೀ ರಾಮಚಂದ್ರ ಎ ರವರ ನೇತೃತ್ವದ ಯುವಶಕ್ತಿ ತಂಡದ ಎಲ್ಲಾ ಅಭ್ಯರ್ಥಿಗಳು ಪ್ರಚಂಡ ಬಹುಮತದಿಂದ ಜಯಗಳಿಸಿದ್ದಾರೆ. ಈ ಮೂಲಕ ಮೆಸ್ಕಾಂ ಪುತ್ತೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಅದ ರಾಮಚಂದ್ರ ಎ ರವರು ಕೆಪಿಟಿಸಿಎಲ್ ಡಿಪ್ಲೋಮಾ ಇಂಜಿನಿಯರ್ ಅಸೋಸಿಯೇಷನ್ (ರಿ). ಬೆಂಗಳೂರು ಇದರ ರಾಜ್ಯಾಧ್ಯಕ್ಷ ರಾಗಿ ಆಯ್ಕೆ ಯಾಗಿರುತ್ತಾರೆ.

ಸುಮಾರು ಇಪ್ಪತ್ತು ವರ್ಷಗಳ ಇತಿಹಾಸದಲ್ಲಿ ಪ್ರಥಮ ಬಾರಿಗೆ ಚುನಾವಣಾ ಮೂಲಕ ಕೇಂದ್ರ ಸಮಿತಿಯ ಪದಾಧಿಕಾರಿಗಳ ಆಯ್ಕೆ ನಡೆದಿರುತ್ತದೆ. ಸದ್ರಿ ಕೆಪಿಟಿಸಿಎಲ್ ಡಿಪ್ಲೊಮಾ ಇಂಜಿನಿಯರ್ಸ್ ಅಸೋಸಿಯೇಷನ್ (ರಿ ) ಕೆಪಿಟಿಸಿಎಲ್ ಮತ್ತು ರಾಜ್ಯದ ಎಲ್ಲಾ ಎಸ್ಕಾಂ ಗಳ ಸುಮಾರು 3500 ಕ್ಕೂ ಹೆಚ್ಚು ಡಿಪ್ಲೊಮಾ ಇಂಜಿನಿಯರ್ಸ್ ಗಳ ಸದಸ್ಯತ್ವ ಹೊಂದಿರುವ ಅಸೋಸಿಯೇಷನ್ ಇದರ ಕೇಂದ್ರ ಕಚೇರಿ ಬೆಂಗಳೂರು ನಲ್ಲಿ ಕಾರ್ಯಾಚರಿಸುತ್ತಿದ್ದು… ಇತಿಹಾಸದಲ್ಲಿ ಮೊದಲ ಬಾರಿ ಕೆಪಿಟಿಸಿಎಲ್ ಮತ್ತು ಎಲ್ಲಾ ಎಸ್ಕಾಂ ಗಳ ವಿವಿಧ ಸಂಘಟನೆಗಳ ಕೇಂದ್ರ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಬೆಂಗಳೂರು ಕೇಂದ್ರ ಸ್ಥಾನದಲ್ಲಿ ಕೆಲಸ ನಿರ್ವಹಿಸುವವರನ್ನು ಹೊರತುಪಡಿಸಿ ಬೇರೆ ಎಸ್ಕಾಂ ನ ಪ್ರತಿನಿಧಿ ಗೆ ರಾಜ್ಯಾಧ್ಯಕ್ಷ ಸ್ಥಾನ ದೊರಕಿರುವುದು ಇತಿಹಾಸವಾಗಿದೆ.


 

 

 

ಇವರು ಪುತ್ತೂರು ತಾಲೂಕಿನ ಉಪ್ಪಿನಂಗಡಿ ಯ ಬೆದ್ರೋಡಿ ಮೂಲದವರಾಗಿದ್ದು, ಪ್ರಸ್ತುತ ಮೆಸ್ಕಾಂ ನ ಪುತ್ತೂರು ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಪುತ್ತೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಹುದ್ದೆಯಲ್ಲೂ ಪ್ರಭಾರ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

 

 

 

Continue Reading
Click to comment

Leave a Reply

Your email address will not be published. Required fields are marked *

Advertisement