Published
21 hours agoon
By
Akkare News34ನೇ ನೆಕ್ಕಿಲಾಡಿ ಹೆಲ್ಪ್ ಲೈನ್ ಇದರ ವತಿಯಿಂದ ದಿನಾಂಕ 25/ 4 /25ರ ಶುಕ್ರವಾರ ನೆಕ್ಕಿಲಾಡಿ ಜಂಕ್ಷನ್ ನಲ್ಲಿ ಇತ್ತೀಚೆಗೆ ಕಾಶ್ಮೀರದ ಪಹಲ್ಗಾಂ ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿ, ಮೃತಪಟ್ಟ ಪ್ರವಾಸಿಗರಿಗೆ ಮೊಂಬತ್ತಿ ಉರಿಸಿ ಸಂತಾಪ ಸೂಚಿಸಲಾಯಿತು.
ಸಂತಾಪ ಸೂಚಕ ಸಭೆಯಲ್ಲಿ ಝಕರಿಯ ಕೊಡಿಪ್ಪಾಡಿ ಪ್ರಾಸ್ತಾವಿಕ ಮಾತನಾಡಿ, ಈ ಭಯೋತ್ಪಾದಕ ಕೃತ್ಯವು ಭಾರತದ ಪ್ರತಿಯೊಬ್ಬ ನಾಗರಿಕನು ತಲೆ ತಗ್ಗಿಸುವಂತೆ ಮಾಡಿದೆ. ಕೇಂದ್ರ ಸರಕಾರದ ಭದ್ರತಾ ಲೋಪ ಈ ಕೃತ್ಯದ ಹಿಂದೆ ಎದ್ದು ಕಾಣುತ್ತಿದೆ. ಇದಕ್ಕೆ ಪೂರಕವಾಗಿ ಮಾಧ್ಯಮವು ಕಪೋಲ ಕಲ್ಪಿತ ಸುಳ್ಳುಗಳನ್ನು ಬಿತ್ತರಿಸುತ್ತಿದೆ. ಇದಕ್ಕೆಲ್ಲ ಪ್ರಜ್ಞಾವಂತ ನಾಗರಿಕರು ಉತ್ತರ ಕೊಡುವ ದಿನಗಳು ದೂರವಿಲ್ಲ ಎಂದರು. ಸಭೆಯನ್ನು ಉದ್ದೇಶಿಸಿ ಅಬ್ದುಲ್ ರೆಹಮಾನ್ ಯುನಿಕ್, ಅಡ್ವಕೇಟ್ ನೌಶಾದ್, ಇರ್ಷಾದ್ ಯು.ಟಿ ಘಟನೆಯನ್ನು ಖಂಡಿಸಿ ಮಾತನಾಡಿದರು. ಸಭೆಗೆ ಮೊದಲು ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಹಲವು ಗಣ್ಯರು ಉಪಸ್ಥಿತರಿದ್ದರು. ರಿಜ್ವಾನ್ ಎ.ವೈ.ಎಂ ಸ್ವಾಗತಿಸಿ,ಶರೀಕ್ ಅರಫಾ ವಂದಿಸಿದರು.